Belagavi

ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಸೋಸಾಯಿಟಿಯ ೨೬ನೇ ವಾರ್ಷಿಕ ಸಭೆ


ಮೂಡಲಗಿ: ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಸೋಸಾಯಿಟಿಯು ಸದ್ಯ ಒಂಬತ್ತು ಶಾಖೆಗಳನ್ನು ಹೊಂದಿ ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಿದು, ಶೀಘ್ರದಲ್ಲಿಯೇ ಮುರಗೋಡ, ಮುನವಳ್ಳಿ, ಸವದತ್ತಿ, ಚಿಕ್ಕೊಪ್ಪ ಮತ್ತು ಕೌಜಲಗಿಯಲ್ಲಿ ಶಾಖೆ ಪ್ರಾರಂಭಿಸಲ್ಲಾಗುವುದು ಎಂದು ಸೊಸೈಟಿಯ ಅಧ್ಯಕ್ಷ ಬಸಪ್ಪ ಚಿ.ಮುಗಳಖೋಡ ಹೇಳಿದರು.
ಅವರು ಸೋಮವಾರದಂದು ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೋಸಾಯಿಟಿಯ ೨೬ನೇ ವಾರ್ಷಿಕ ಸರ್ವಸಾಧಾರ ಸಭೆಯ ಅಧ್ಯಕ್ಷತೆ ವಹಿಸಿ ವರದಿವಾಚನ ಮಂಡಿಸಿ ಮತನಾಡಿ, ಸೋಸೈಟಿಯು ಶೇರುದಾರ-ಠೇವಣಿದಾರ ಮತ್ತು ಸಿಬ್ಬಂದಿ ವರ್ಗದವರ ಸಹಕಾರ ಕೋವಿಡ್ ಸಂಧರ್ಭದಲ್ಲಿಯು ಕೂಡಾ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ೧೫೦.೩೬ ಕೋಟಿ ದುಡಿಯುವ ಬಂಡವಾಳ ಹೊಂದಿ ಸೂಮಾರು ೨.೭೨ ಕೋಟಿ ರೂ ಲಾಭಗಳಿಸಿದೆ, ಸೋಸೈಟಿಯು ವಿವಿಧ ತೆರನಾದ ಗ್ರಾಹಕರಿಗೆ ಸಾಲವಿತರಿಸಿದು, ಶೈಕ್ಷಣಿಕ, ಧಾರ್ವಿಕ ಹಾಗೂ ಸಮಾಜಿಕವಾಗಿ ಹಲುವು ಕಾರ್ಯಗಳನ್ನು ಕೈಗೊಂಡು ಸೋಸೈಟಿಯು ಜನಮನದಲ್ಲಿ ಉಳಿದೆ ಎಂದರು.
ಪಟ್ಟಣದ ನೀಲಕಂಠೇಶ್ವರ ಮಠದ ಶ್ರೀ ಶಿವಾನಾಂದ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ ಸಂಸ್ಥೆಯು ಪ್ರಗತಿಹೊಂದಲು ಆಡಳಿಮಂಡಳಿ, ಸಿಬ್ಬಂದಿ ವರ್ಗವರು ಹಾಗೂ ಗ್ರಾಹಕರ ಸಹಕಾರ ಬಹಳ ಮುಖ್ಯಾದದ್ದು,ಸೋಸೈಟಿಯು ಶಾಖೆಗಳನ್ನು ಜಾಗ್ರೂತೆಯಿಂದ ಪ್ರಾರಂಭಿಸಬೇಕೆAದು ಸಲಹೆ ನೀಡಿದರು.
ಅಢಾವೆಯನ್ನು ಮಲ್ಲಿಕಾರ್ಜುನ ಗೋಲಭಾವಿ, ಲಾಭ-ಹಾನಿಯನ್ನು ಪ್ರಕಾಶ ಬೆಳಕೂಡ,ಲಾಭ-ಹಾನಿ ವಿಂಗಡನೆಯನ್ನು ದೇವೆಂದ್ರ ಅರ್ಜುನಗಿ ಮಂಡಿಸಿದರು.
ಈ ಸಮಯದಲ್ಲಿ ಚಾರ್ಟರ್ಡ ಅಂಕೌAಟAಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪಟ್ಟಣದ ಧರ್ಮಾಜಿ ಶಿವರುದ್ರಪ್ಪ ಪೋಳ ಮತ್ತು ಪಟಗುಂದಿಯ ಸಂತೋಷ ರಾಜು ಹೊಸಮನಿ ಅವರನ್ನು ಸನ್ಮಾನಿಸಿ ಗೌರಿಸಿದರು ಮತ್ತು ನಿಧನ ಹೊಂದಿ ಸೋಸೈಟಿಯ ಶೇರುದಾರರಿಗೆ ಮೌನಾಚರಣೆ ಮೂಲಕ ಶೃದ್ದಾಂಜಲಿ ಸಲ್ಲಿಸಿದರು.
ಸಭೆಯ ವೇದಿಕೆಯಲ್ಲಿ ಸೋಸೈಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ ಮತ್ತು ವಿವಿಧ ಶಾಖೆಗಳ ಸಲಹಾ ಸಮೀತಿಯ ಬಸವರಾಜ ಕಲ್ಯಾಣಿ, ಬಸವರಾಜ ಬಟಕುರ್ಕಿ, ಲಲಿತಾ ಹೊಸೂರ, ಶಿವಾನಂದ ಹಳ್ಳೂರ, ಗಂಗಪ್ಪ ಮಂಟೂರ, ಮಲ್ಲಿಕಾರ್ಜುನ ಚಟ್ಟಿ, ಪ್ರಶಾಂತ ಬದನಿಕಾಯಿ, ಶಂಕ್ರಯ್ಯಾ ಹಿರೇಮಠ ಮತ್ತು ಸಮಾರಂಭದಲ್ಲಿ ಪ್ರಧಾನ ಕಚೇರಿಯ ನಿರ್ದೇಶಕರಾದ ಸುಭಾಸ ಬೆಳಕೂಡ, ಇಸ್ಮಾಯಿಲ ಕಳ್ಳಮನಿ, ಗೊಡಚಪ್ಪಾ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಮಂತವ್ವಾ ಬೊರಗಲ್, ಮಹಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ ಹಾಗೂ ತುಕ್ಕಾನಟ್ಟಿ, ಯಾದವಾಡ, ಮಹಾಲಿಂಗಪೂರ, ಘಟಪ್ರಭಾ, ತೇರದಾಳ, ಬನಹಟ್ಟಿ, ರಾಮದುರ್ಗ, ಹಾರುಗೇರಿ, ಯರಗಟ್ಟಿ ಶಾಖೆಗಳ ಸಲಹಾ ಸಮೀತಿ ಸದಸ್ಯರು ಮತ್ತಿತರು ಇದ್ದರು.
ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೋಡಿ ಸ್ವಾಗತಿಸಿದರು, ಶಿಕ್ಷಕ ಚಂದ್ರಕಾAತ ಕೋಡತೆ ನಿರೂಪಿಸಿದರು, ಪ್ರಮೋದ ಯಲಬುರ್ಗಿಮಠ ವಂದಿಸಿದರು.


Leave a Reply