Belagavi

ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ


ಬೈಲಹೊಂಗಲ ೨೮- ಕರೋನಾ ಸಂದರ್ಭದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಉತ್ತಮ ಕಾರ್ಯ ಮಾಡಿದ್ದಾರೆಂದು ಮುಖಂಡ ನಾಗಪ್ಪ ಮೇಟಿ ಹೇಳಿದರು.
ಸಮೀಪದ ಇಂಚಲ ಗ್ರಾಮದಲ್ಲಿ ಅಂಬಾಪರಮೇಶ್ವರಿ ಸ್ಪೋರ್ಟ್ಸ್ ಕ್ಲಬ್, ನಾಗಪ್ಪ ಮೇಟಿ ಗೆಳೆಯರ ಬಳಗದಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾದುದು. ಜನಪದ, ಭಜನಾ ಕಲಾವಿದರು ಸಮಾಜ ತಿದ್ದುವ ಕಾರ್ಯ ಮಾಡುತ್ತಿದ್ದಾರೆಂದು ತಿಳಿಸಿದರು.
ಇದೇ ವೇಳೆ ಅಂತರರಾಷ್ಟಿçÃಯ ಕ್ರೀಡಾಪಟು ನಾಗರಾಜ ಚಂದರಗಿ, ಅಂಧ ಸಂಗೀತ ಶಿಕ್ಷಕ ಬಾಬು ರಾಯನಾಯ್ಕರ, ಚನಪದ, ಭಜನಾ ಕಲಾವಿದರನ್ನು ಸತ್ಕರಿಸಲಾಯಿತು. ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಕೆಇಬಿ ಹಂರ‍್ಸ್, ದ್ವಿತೀಯ ಉದ್ದಮ್ಮ ಉದಗಟ್ಟಿ, ತೃತೀಯ ಸ್ಥಾನ ಗಳಿಸಿದ ರೇವಣಶಿದ್ದೇಶ್ವರ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಪ್ರೊ. ಎಸ್.ಎಂ.ಬಡ್ಲಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಮಿರ್ಜನ್ನವರ, ಎಸ್.ಆರ್.ಸೋಮನ್ನವರ, ಎಂ.ಆರ್.ಹಾರುಗೊಪ್ಪ, ಎಸ್.ಆರ್.ರಾಯನಾಯ್ಕರ, ಬಸವರಾಜ ಸಾವಳಗಿ, ಎಂ.ಬಿ.ಖಾನಗೌಡ್ರ, ಬಿ.ಎಸ್.ವಾರಿ, ಅಶೋಕ ವನ್ನೂರ, ಇನ್ನಿತರರು ಪಾಲ್ಗೊಂಡಿದ್ದರು.


Leave a Reply