Belagavi

ಸಮಾಜವಾದಿ ಪಾರ್ಟಿಯ ಪದಾಧಿಕಾರಿಗಳ ಆಯ್ಕೆ


ಬೆಳಗಾವಿ :  ರಾಜ್ಯದಎಲ್ಲ ಜಿಲ್ಲೆಗಳಲ್ಲಿಯೂ ಪಕ್ಷದ ಸದಸ್ಯತ್ವ ಪ್ರಾರಂಭವಾಗಿದೆ ಅದೇ ರೀತಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಸದಸ್ಯತ್ವ ನೋಂದಣಿಗೆ  ಅಧಿಕೃತವಾಗಿ  ರಾಜ್ಯಾಧ್ಯಕ್ಷರಾದ ಮಂಜಪ್ಪ ಚಾಲನೆ ನೀಡಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಸಮಾಜ ವಾದಿ ಪಾರ್ಟಿ ಜಿಲ್ಲಾ ಸಮಿತಿಯ ಹಾಗೂ ಕೆಲವು ರಾಜ್ಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮುಂಬರುವ ಸ್ಥಳೀಯ ಸಂಸ್ಥೆಗಳ, ವಿಧಾನಸಭಾ ಚುನಾವಣೆಗಳಿಗೆ ಪಾರ್ಟಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷವು ಎಲ್ಲಾ ರೀತಿಯ ಸಿದ್ಧತೆ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಮಂಜಪ್ಪ  ಮಾತನಾಡಿ, ಪಕ್ಷವನ್ನು ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಂಘಟಿಸಲಾಗುವುದು ಎಂದು ತಿಳಿಸಿದರು.  ಬೆಲೆಯೇರಿಕೆಯ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಮಾಜವಾದಿ ಪಾರ್ಟಿಯು ಬೀದಿಗಿಳಿದು ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯದ ಕಾರ್ಮಿಕ ವಿಭಾಗದ ಉಪಾಧ್ಯಕ್ಷರನ್ನಾಗಿ ಗಂಗಾಧರ್ ದೊಡ್ಮನಿ ಅವರನ್ನು ಆಯ್ಕೆ ಮಾಡಿ ಆದೇಶ ನೀಡಲಾಯಿತು. ಜಿಲ್ಲಾ ಅಧ್ಯಕ್ಷರನ್ನಾಗಿ ರಾಜೇಶ್ ವಡಗಾವಿ,  ಮತ್ತು ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಗಳನ್ನು ಆಯ್ಕೆ ಮಾಡಿ ಆದೇಶ ನೀಡಲಾಯಿತು. ಈ ಸಮಾಜವಾದಿ ಪಾರ್ಟಿಯ  ಕಾರ್ಯಕ್ರಮವನ್ನು ನಾಗರಾಜ್ ನಾಯಕ್ ರಾಜ್ಯ ಅಧ್ಯಕ್ಷರು ಕಾರ್ಮಿಕ ವಿಭಾಗ ಸಮಾಜವಾದಿ ಪಾರ್ಟಿ ಕರ್ನಾಟಕ ಇವರು ಸಂಘಟಿಸಿ ವ್ಯವಸ್ಥಿತವಾಗಿ ಮುನ್ನಡೆಸಿದರು.
ಈ ಸಂದರ್ಭದಲ್ಲಿ   ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ ನಾರಾಯಣ, ರಾಜ್ಯ ಉಪಾಧ್ಯಕ್ಷ ಆಕಾಶ್ ಯಜಮಾನ, ಖಜಾಂಚಿ ಶಿವರುದ್ರಯ್ಯ ಸಂಘಟನಾ ಕಾರ್ಯದರ್ಶಿಗಿರೀಶ್ ರಾಜ್ಯ ಕಾರ್ಯದರ್ಶಿಯಾದ ಎನ್ ನಾರಾಯಣಸ್ವಾಮಿ, ಭಗವಾನ್ ಮಾದರ, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಮಂಜುಳಾ, ಡಾ.ಜ್ಯೋತಿ, ಮಮತಾ ನಾಯಕ್, ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply