Belagavi

ಕಳೆದ ವರ್ಷದ ಕೆಎಸ್‍ಆರ್‍ಟಿಸಿ ಬಸ್ ಪಾಸನ್ನು ಈ ವರ್ಷವು ಅವಕಾಶಕ್ಕೆ ಎಐಡಿಎಸ್‍ಓ ಆಗ್ರಹ


ಬೆಳಗಾವಿ: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಳೆದ ವರ್ಷ ಪಡೆದ ಕೆಎಸ್‍ಆರ್‍ಟಿಸಿ ಬಸ್ ಪಾಸನ್ನು ಸರಿಯಾಗಿ ಬಳಕೆ ಆಗಿಲ್ಲ. ಹಾಗಾಗಿ ಈ ಬಾರಿ ಕಳೆದ ವರ್ಷದ ಬಸ್ ಪಾಸನ್ನೇ ಈ ವರ್ಷದ ಶೈಕ್ಷಣಿಕ ವರ್ಷಪೂರ್ತಿ ಬಳಕೆಗೆ ಅವಕಾಶ ನೀಡಬೇಕೆಂದು ಎಐಡಿಎಸ್‍ಓ ಸಂಘಟನೆ ವತಿಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಇಂದು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಆವರಣದಲ್ಲಿ ಎಐಡಿಎಸ್‍ಒ ಸಂಘಟನೆಯ ವಿದ್ಯಾರ್ಥಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇನ್ನು ಕಳೆದ ವರ್ಷದ ಪಾಸನ್ನು ಕೋವಿಡ್‍ನಿಂದಾಗಿ ಯಾವ ವಿದ್ಯಾರ್ಥಿಗಳೂ ಬಳಕೆ ಮಾಡಿಲ್ಲ. ಹಾಗಾಗಿ ಕಳೆದ ವರ್ಷದ ಕೆಎಸ್‍ಆರ್‍ಟಿಸಿ ಪಾಸನ್ನೇ ಬಳಕೆ ಮಾಡಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಂತರ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ನಾಯಕ ಮಹಾಂತೇಶ ಮಾತನಾಡಿ, ಕೋವಿಡ್ ನಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಪಾಲಕರು ತೊಂದರೆಗೆ ಈಡಾಗಿದ್ದಾರೆ. ಪ್ರತಿದಿನ ಕಾಲೇಜಿಗೆ ವಿದ್ಯಾರ್ಥಿಗಳು ನೂರಾರು ರೂಪಾಯಿ ಹಾಕಿಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ವರ್ಷದುದ್ದಕ್ಕೂ ಕಳೆದ ವರ್ಷದ ಪಾಸನ್ನೇ ಬಳಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ರಾಜು ಗಾಣಿಗ, ವಿದ್ಯಾರ್ಥಿನಿ ಮುಸ್ಕಾನ್‍ಗಿತು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.


Leave a Reply