Belagavi

ಕೋರ್ಟ್ ಆವರಣದಲ್ಲಿಯೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ


ಬೈಲಹೊಂಗಲ: ಕೌಟುಂಬಿಕ ಕಲಹದ ಕುರಿತು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಂದ ವೇಳೆ ನಿವೃತ್ತ ಸೈನಿಕನೋರ್ವ ತನ್ನ ಪತ್ನಿ ಮೇಲೆ ಕೋರ್ಟ್ ಆವರಣದಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ ತನ್ನ ಪತ್ನಿ ಜಯಮಾಲಾ ಮೇಲೆ ಮಾರಕಾಸ್ತ್ರದಿಂದ ಹತ್ಯೆಗೆ ಯತ್ನಿಸಿದ್ದಾನೆ. ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದ್ದು ಬೆಚ್ಚಿ ಬೀಳಿಸಿದೆ.

ಪತಿ, ಪತ್ನಿಯ ಕಲಹ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇತ್ತು. ಪತ್ನಿ ಹುಬ್ಬಳ್ಳಿ ತಾಲೂಕಿನ ವರೂರದಲ್ಲಿ ಇರುತ್ತಿದ್ದಳು. ಪುತ್ರಿ ಶಿವಾಣಿ ತಾಯಿ ಜೊತೆ ಇದ್ದಳು. ಇದೀಗ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


Leave a Reply