Belagavi

ಗ್ರಂಥಾಲಯಗಳು ಮುಂದಿನ ಜನಾಂಗದ ಅತ್ಯಂತ. ದೊಡ್ಡ ಆಸ್ತಿ. ರಾಮತೀರ್ಥನಗರ ಗ್ರಂಥಾಲಯ ಉದ್ಘಾಟಿಸಿದ ಡಿ.ಸಿ. ಎಂ.ಜಿ.ಹಿರೇಮಠ ಅಭಿಮತ..


ಬೆಳಗಾವಿ. ೨೯. ಜನರ  ಗ್ರಂಥಾಲಯದ ಬೇಡಿಕೆ  ನನಗೆ ಅತ್ಯಂತ.  ಖುಷಿ  ತಂದಿದೆ.  ಗ್ರಂಥಾಲಯಗಳು  ಮುಂದಿನ ಜನಾಂಗದ. ಅತ್ಯಂತ. ದೊಡ್ಡ. ಆಸ್ತಿಯಲ್ಲದೆ, ಚಾರಿತ್ರ್ಯ ರೂಪಿಸುವ. ಕೇಂದ್ರಗಳು ಎಂದು  ಜಿಲ್ಲಾಧಿಕಾರಿ   ಎಂ.ಜಿ. ಹಿರೇಮಠ.  ಹೇಳಿದರು.  ಅವರು  ಮಂಗಳವಾರ.ಸಂಜೆ ಬೆಳಗಾವಿಯ. ರಾಮತೀರ್ಥನಗರದಲ್ಲಿ  ಸ್ನೇಹ ಸಮಾಜ. ಸೇವಾ ಸಂಘದಿಂದ  ಆಯೋಜಿಸಿದ  ಉದ್ಘಾಟನಾ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ನೂತನ. ಗ್ರಂಥಾಲಯ. ಉದ್ಘಾಟಿಸಿ,  ಸರಸ್ವತಿ  ಮಾತೆಗೆ  ಪೂಜೆ  ಸಲ್ಲಿಸಿ  ಮಾತನಾಡಿದರು.  ನನ್ನ. ಕಲಿಕಾ  ದಿನಗಳಲ್ಲಿ ಬಳಸಿದ. ಅಂದಿನ. ನಗರದ. ಚವಾಟ ಗಲ್ಲಿಯ. ಸಾರ್ವಜನಿಕ.  ಗ್ರಂಥಾಲಯ ಮತ್ತು  ಶಾಲಾ, ಕಾಲೇಜುಗಳ ಗ್ರಂಥಾಲಯಗಳು  ನನ್ನ. ಇಂದಿನ. ಗಟ್ಟಿ  ಬದುಕಿಗೆ  ಸಾಕ್ಷಿಯಾಗಿವೆ.   ತಾವೂ   ಇಂಥ. ಗ್ರಂಥಾಲಯಗಳನ್ನು. ಬಳಸಿ   ಮಕ್ಕಳಿಗೆ ಗ್ರಂಥಾಲಯಗಳ  ಅರಿವು  ಮೂಡಿಸಿ ನಿರಂತರ ಬಳಕೆಗೆ  ಸ್ಪೂರ್ತಿ ಯಾಗಬೇಕೆಂದರಲ್ಲದೆ, ನಿಸ್ವಾರ್ಥ ದಿಂದ. ಸಾರ್ವಜನಿಕರ ಸೇವೆಗೆ  ನಿಂತ. ಇಂಥ. ಸಂಘ, ಸಂಸ್ಥೆಗಳಿಗೆ  ಸಹಕಾರ. ನೀಡಬೇಕು,  ಎಂದು  ಕಿವಿ ಮಾತು  ಹೇಳಿದರು.    ನಗರ. ಶಾಸಕ ಅನಿಲ ಬೆನಕೆ  ಫಲಕ. ಅನಾವರಣ ಗೊಳಿಸಿ  ಮಾತನಾಡಿ,  ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು  ತಮ್ಮ. ಕಲಿಕಾ ದಿನಗಳಲ್ಲಿ  ನಿತ್ಯ. ಅಧ್ಯಯನಕ್ಕೆ  ಬಳಸುತ್ತಿದ್ದ.  ಇಂದಿನ. ಚವಾಟ ಗಲ್ಲಿಯಲ್ಲಿಯ ಗೋಡೌನ ಸ್ಥಳವಾಗಿರುವ.  ಗ್ರಂಥಾಲಯವನ್ನು   ಪುನಃಶ್ಚೇತನಗೊಳಿಸಿ   ಅತ್ಯಧುನಿಕ. ಗ್ರಂಥಾಲಯವಾಗಿಸುವೆ.  ಈ ಸ್ನೇಹಸಮಾಜ ಸೇವಾ ಸಂಘ ಅತ್ಯುತ್ತಮ. ಜನ ಸೇವೆ ಮಾಡುತ್ತಿರುವದು  ಖುಷಿ ವಿಚಾರ. ,  ಇಂದಿನ. ಗ್ರಂಥಾಲಯ. ಚಿಕ್ಕದಾಗಿದ್ದು ಅದಕ್ಕೆ  ಹೊಂದಿಕೊಂಡಿರುವ ಜಾಗೆಯಲ್ಲಿ  ದೊಡ್ಡ ದನ್ನಾಗಿ  ಮಾಡಿ ಕಟ್ಟಿ ಕೊಡುವ. ಹೊಣೆಗಾರಿಕೆ ನನ್ನದು. ಜನರಿಗೆ  ಈ. ಕುರಿತ. ಸಂಶಯ. ಬೇಡವೇ   ಬೇಡ.  ಗ್ರಂಥಾಲಯ ಬದಿಯ. ಸ್ಥಳವನ್ನು  ಗ್ರಂಥಾಲಯ ಕ್ಕೆ ಮೀಸಲಾಗಿರಿಸಿದೆ , ಇದು  ನನ್ನ. ಭರವಸೆ   ಎಂದರಲ್ಲದೆ,  ಜನರು ಬಯಸಿದ್ದನ್ನು  ಕೊಡುವದು  ಶಾಸಕನಾದ. ನನ್ನ. ಕರ್ತವ್ಯ.  ಈ. ಬಡಾವಣೆಯಲ್ಲಿ   ನೆಮ್ಮದಿ ,  ಖುಷಿ, ಸಂತೋಷ ಎಲ್ಲವೂ   ಇದೆ.  ಜನರಿಗೆ  ಬೇಕಾದ. ಪೋಲಿಸ್  ಠಾಣೆ,  ಯು ಜಿ.ಡಿ , ಸೇರಿದಂತೆ ಇತರ. ಮೂಲ. ಸೌಕರ್ಯ ಗಳ. ಯೋಜನೆಗಳ. ಪ್ರಸ್ತಾವನೆ  ಸರ್ಕಾರದ. ಅಂತಿಮ. ಮಟ್ಟದಲ್ಲಿದ್ದು  ಅವುಗಳ. ಶೀಘ್ರ ಅನುಷ್ಠಾನಕ್ಕೆ  ಯತ್ನಿಸುತ್ತೇನೆ  ಎಂದರು.   ಮಾಜಿ  ಮಹಾಪೌರ. ಎನ್.ಬಿ.ನಿರ್ವಾಣಿ  ಮಾತನಾಡಿ  ಬಡಾವಣೆಯ ಲ್ಲಿಯ. ಜನರ. ಕಷ್ಟಗಳಿ್ಗೆ  ಜನಪ್ರತಿನಿಧಿಗಳು,  ಅಧಿಕಾರಿಗಳು  ಸ್ಪಂದಿಸಬೇಕು. ಬಹುದಿನಗಳ ಯು.ಜಿ.ಡಿ.  ಶೀಘ್ರ. ಕಾರ್ಯರೂಪಕ್ಕೆ  ತರುವ. ಜವಾಬ್ದಾರಿ ಸಚಿವ ,,ಶಾಸಕರ. ಮೇಲಿದೆ  ಎಂದರು.
ಸಂಘದ ಅಧ್ಯಕ್ಷ. ಸುರೇಶ ಉರಬಿನಹಟ್ಟಿ  ಸ್ವಾಗತಿಸಿ, ಪ್ರಾಸ್ತಾವಿಕ  ಮಾತನಾಡಿ, ಬಡಾವಣೆ ಯ. ಕುಂದು, ಕೊರತೆಗಳ.ಮನವರಿಕೆ ಮಾಡಿದರಲ್ಲದೇ  ಸಂಘದ. In ದೇಯೋದ್ಧೇಶಗಳ ಕುರಿತು  ಮಾತನಾಡಿದರು
ಕಾರ್ಯಕ್ರಮದಲ್ಲಿ , ನಗರ ಸೇವಕ ಹನುಮಂತ ಕೊಂಗಾಲಿ,  ಡಾ.ಡಿ.ಎನ್.ಮಿಸಾಳೆ, ಜಗದೀಶ ಮಠದ  ಸಂಘದ  ಕಾರ್ಯದರ್ಶಿ  ಶಿವನಪ್ಪಾ ಕಮತ, ಮಹೇಶ ಚಿಟಗಿ, ಸಂಘಟ‌ನಾ ಕಾರ್ಯದರ್ಶಿ ವಿಲಾಸ ಕೆರೂರ, ಉಪಾಧ್ಯಕ್ಷ ರಾದ. ಎಸ್.ಜಿ.ಕಲ್ಯಾಣಿ, ರಾಜೇಂದ್ರ ರತನ್, ಖಜಾಂಚಿ ಡಿ.ಎಮ್.ಟೊಣ್ಣೆ,  ನಿರ್ದೇಶಕರಾದ. ಮಹೇಶ ಮಾವಿನಕಟ್ಟಿ, ನಜೀರಹ್ಮೆದ್  ದಳವಾಯಿ,  ದುಂಡಪ್ಪಾ ಉಳ್ಳಾಗಡ್ಡಿ, ಈರಣ್ಣಾ ಕಟ್ಟಾವಿ, ಮಲ್ಹಾರ ದಿಕ್ಷೀತ, ಕಲ್ಲಪ್ಪಾ ಮಜಲಟ್ಟಿ, ಸಿ.ಎಸ್.ಖನಗಣ್ಣಿ, ಸೇರಿದಂತೆ  ಜಿ.ಎಸ್.ಹಿರೇಮಠ, ಬಸವರಾಜ ಗೌಡಪ್ಪಗೋಳ, ಮಲ್ಲೇಶ ಸೊಂಟಕ್ಕಿ, ಎಸ್.ಎಮ. ಮೇಲಿನಮನಿ, ಟಕಳೆ ಮುಂತಾದ  ಹಿರಿಯ ನಾಗರಿಕರು, ಮಹಿಳಾ ಸಂಘದ. ಮಾತೆಯರು ಉಪಸ್ಥಿತರಿದ್ದರು.   ಪ್ರೊ. ಎ.ಕೆ.ಪಾಟೀಲ. ನಿರೂಪಿಸಿದರು.  ಪ್ರತಿಕ್ಷಾ ಟೊಣ್ಣೆ, ನಿರ್ಮಲಾ  ಉರಬಿನಹಟ್ಟಿ  ಪ್ರಾರ್ಥಿಸಿದರು.  ನಗರ ಸೇವಕ. ಹನುಮಂತ. ಕೊಂಗಾಲಿ  ವಂದಿಸಿದರು.

Leave a Reply