Belagavi

ಇಂಚಲ  ಗ್ರಾಮ ವಸತಿ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಲು ಆಗ್ರಹ


 

ಬೈಲಹೊಂಗಲ 29-  ಸಮೀಪದ  ಸವದತ್ತಿ  ತಾಲೂಕಿನ  ಇಂಚಲ  ಗ್ರಾಮವನ್ನು  ಅಮೃತ  ಗ್ರಾಮೀಣ  ವಸತಿ  ಯೋಜನೆ ಅಡಿಯಲ್ಲಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು.

ಸ್ಥಳೀಯ ಪುರಸಭೆ ಸದಸ್ಯ ಯುವ ಧುರೀಣ  ಗುರು ಮೆಟಗುಡ್ಡ ಹಾಗೂ  ಇಂಚಲ ಗ್ರಾ  ಪಂ  ಅಧ್ಯಕ್ಷೆ ಸಿದ್ದವ್ವ ಗೋವನಕೊಪ್ಪ  ಅವರ  ನೇತೃತ್ವದಲ್ಲಿ  ಬೆಳಗಾವಿ ಜಿಲ್ಲಾಧಿಕಾರಿ  ಎಂ, ಜಿ, ಹಿರೇಮಠ ಅವರಿಗೆ ಇಂಚಲ  ಗ್ರಾಮವನ್ನು   ವಸತಿ  ಯೋಜನೆ  ಅಡಿಯಲ್ಲಿ  ಸೇರ್ಪಡೆ  ಮಾಡಬೇಕೆಂದು  ಆಗ್ರಹಿಸಿ ಮನವಿ  ಸಲ್ಲಿಸಲಾಯಿತು.

ಗ್ರಾ, ಪಂ  ಸದಸ್ಯರಾದ  ಮಹಾಂತೇಶ ಬಾಜಿ, ಸಿದ್ದಪ್ಪ  ಬಂಡಿಗೆ  ಸೇರಿದಂತೆ  ಗ್ರಾ , ಪಂ  ಸದಸ್ಯರು  ಈ  ಸಂದರ್ಭದಲ್ಲಿ  ಉಪಸ್ಥಿತರಿದ್ದರು.


Leave a Reply