Belagavi

ಕತ್ತಲಿನಲ್ಲಿ ಕಳ್ಳರಂತೆ ತೇಜೋವಧೆ ಬ್ಯಾನರ್ ಅಂಟಿಸುವುದು ಬಿಜೆಪಿ ಕೆಲಸ: ಚೆನ್ನರಾಜ ಹೊಟ್ಟಿಹೊಳಿ


ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಾರ್ವಜನೀಕ ವಲಯದಲ್ಲಿ ಕ್ರಿಯಾಶೀಲ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲಾರದ ಬಿಜೆಪಿಯು ಅವರ ತೇಜೊವಧೆಯನ್ನು ಮಾಡಲು ಹೊರಟಿದೆ ಇದು ಸಮಂಜಸವಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ತೇಜೊವದೆ ಮಾಡಲು ಕತ್ತಲಿನಲ್ಲಿ ಕಳ್ಳರಂತೆ ಬಂದು ಬ್ಯಾನರ್ ಹಚ್ಚಿ, ಬ್ಯಾನರ್ ಮೂಲಕ ಅವರ ವಿರುದ್ಧ ಅವಹೇಳನ ಕಾರಿ ಬರವಣಿಗೆ ಬರೆದಿದ್ದಾರೆ. ‌ಅದನ್ನು ನಾನು ಖಂಡನೆ ಮಾಡುತ್ತೇನೆ  ಲಕ್ಷ್ಮಿ ಹೆಬ್ಬಾಳಕರ್ ಅವರ ಅಭಿವೃದ್ಧಿ ಕೆಲಸವನ್ನು ಸಹಿಸಿಕೊಳ್ಳಲು ಆಗದ ಬಿಜೆಪಿಯವರು ಹತಾಶಯ ಮನೋಭಾವದಿಂದ ಸುಳ್ಳು ಆರೋಪ ಮಾಡಿದ್ದಾರೆ ಎಂದರು. ‌

ಆ ಸಂಭಂದಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‌ಅತೀ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವದಾಗಿ ಪೊಲೀಸರು ಭರವಸೆ ನೀಡಿದ್ದಾರೆ.  ಸಾರ್ವಜನಿಕ ಕೆಲಸವನ್ನು ಶಾಸಕರು ಅತ್ಯಂತ ಮುತುವರ್ಜಿಯಿಂದ  ಮಾಡುತ್ತಿದ್ದಾರೆ. ಈಗಾಗಲೇ ಲಕ್ಷ್ಮಿ ಹೆಬ್ಬಾಳಕರ್ ಅವರು 25 ವರ್ಷಗಳಲ್ಲಿ ಆಗುವ ಅಭಿವೃದ್ಧಿ ಕೆಲಸವನ್ನು ಕೆವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.


Leave a Reply