Belagavi

ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಡಿಎಸ್ ಎಸ್ ಧರಣಿ ಸತ್ಯಾಗ್ರಹ


ಬೆಳಗಾವಿ: ಪೆಟ್ರೋಲ, ಡಿಜೈಲ್, ಗ್ಯಾಸ್ ಸಿಲೆಂಡರ್ ಹಾಗೂ ಎಲ್ಲಾ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇಂದು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಮಹಾಮಾರಿ ಕರೋಣಾದಿಂದ ಇಡೀ ದೇಶವೇ ಉದ್ಯೋಗ ಕಳೆದುಕೊಂಡು ಕೋಟ್ಯಾಂತರ ಜನರು ಮನೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯು
ಕೂಡಾ ಬಡವರ, ಕೂಲಿ ಕಾರ್ಮಿಕರ, ರೈತರ ಬಗ್ಗೆ ಕಾಳಜಿ ವಹಿಸದ ಕೇಂದ್ರ ಸರಕಾರವು ಪೆಟ್ರೋಲ, ಡಿಜೈಲ, ಗ್ಯಾಸ
ಸಿಲೆಂಡರ್ ಹಾಗೂ ದಿನನಿತ್ಯದ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಸಾಮಾನ್ಯ ಜನರು ಜೀವನ
ನಡೆಸುವುದೇ ಕಷ್ಟವಾಗಿದೆ. ಬಿಜೆಪಿ ಸರಕಾರ ನಡೆಸಲು ವಿಫಲವಾಗಿದ್ದು, ತಕ್ಷಣ ಪ್ರಧಾನಿಯವರಿಂದ ರಾಜಿನಾಮೆ
ಪಡೆದುಕೊಂಡು, ರಾಷ್ಟ್ರಪತಿ ಅಳ್ವಿಕೆ ಜಾರಿಮಾಡಿ. ಬಡಜನರಿಗೆ, ನ್ಯಾಯ ಒದಗಿಸಿಕೊಡಬೇಕು. ಆದಷ್ಟು ಶೀಘ್ರವಾಗಿ ದಿನನಿತ್ಯಕ್ಕೆ
ಬೇಕಾಗುವ ಎಲ್ಲ ವಸ್ತುಗಳ ಹಾಗೂ ಪೆಟ್ರೋಲ, ಡಿಜೆ ಬೆಲೆಯನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಡಿಎಸ್ ಎಸ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಸಂಚಾಲಕ ಶ್ರೀಕಾಂತ್ ತಳವಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಗಾಯದ ಮೇಲೆ ಬರೆ ಎಂಬಂತೆ ಅಗತ್ಯ ವಸ್ತುಗಳ ಭಾರಿ ಬೆಲೆ ಏರಿಕೆಗೆ ಕ್ರಮ ವಹಿಸುವ ಕ್ರೌರ್ಯವನ್ನು ಮೆರೆದಿವೆ. ಬಿ.ಜೆ.ಪಿ. ನೇತೃತ್ವದ ಈ ಎಲ್ಲಾ ದುಷ್ಟ ಕ್ರಮಗಳನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ. ಈ ದುಷ್ಟ ಕ್ರಮಗಳನ್ನು ತಕ್ಷಣವೆ ಹಿಂಪಡೆಯುವಂತೆ ಬಲವಾಗಿ ಒತ್ತಾಯಿಸುತ್ತದೆ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವಲಕರ, ಚೇತನ ಮುಗಳಿ, ಗುರುನಾಥ ಕೆರೂರ, ಪ್ರೀಯಾ ಕಾಂಬಳೆ, ಸಂತೋಷ ಘಸ್ತಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.


Leave a Reply