Belagavi

ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಸಮಗ್ರ ಕೃಷಿ ನೀತಿ ಅನುಸರಿಸಿ ರೈತರು ಆರ್ಥಿಕವಾಗಿ ಮುಂದೆ ಬರಬೇಕು ಸಚಿವ ಬಿ ಸಿ ಪಾಟೀಲ


ಬೈಲಹೊಂಗಲ 30:- ರೈತರು ತಮ್ಮ ಕೃಷಿ ಚಟುವಟಿಕೆಯೊಂದಿಗೆ  ಉಪಕಸಬು ಹೊಂದಿ ಸಮಗ್ರ ಕೃಷಿ ನೀತಿ ಅನುಸರಿಸಿ ಆರ್ಥಿಕವಾಗಿ ಸದೃಢವಾಗಬೇಕೆಂದು ಎಂದು ಕೃಷಿ ಸಚಿವ ಬಿಸಿ ಪಾಟೀಲ ಹೇಳಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಗುರುವಾರ ಜರುಗಿದ  ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಕಾರ ರೈತರ ಸಮಗ್ರ ಅಭಿವೃದ್ಧಿಗೆ ಹೊಸ  ಯೋಜನೆಗಳನ್ನು ಜಾರಿಗೆ ತಂದಿದೆ ಅಲ್ಲದೆ  ರೈತರಿಗಾಗಿ  ಕೃಷಿ ಬಜೆಟ್ ನಲ್ಲಿ  500 ಕೋಟಿ ರೂ ಗಳನ್ನು  ಮೀಸಲಿಡಲಾಗಿದೆ.ರೈತರ  ಕೃಷಿಗಾಗಿ ಬೀಜ-ಗೊಬ್ಬರ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡೆದು ರೈತರು   ಆಧುನಿಕ ಕೃಷಿಯನ್ನು ಹೊಂದಬೇಕೆಂದು ನುಡಿದರು.

ರೈತರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡುವುದಲ್ಲದೆ ರೈತರ ಮಕ್ಕಳ ಹೆಚ್ಚಿನ ವ್ಯಾಸಂಗಕ್ಕಾಗಿ ರಿಜರ್ವವೇಶನ್ ನೀಡಲಾಗುತ್ತಿದೆ. ರೈತರು ಮನೆಗೆ ಸರ್ಕಾರದ ಯೋಜನೆಗಳನ್ನು ತರುವ ಕಾರ್ಯವನ್ನು ಮಾಡಲಾಗಿದೆ, ಈ  ದೇಶಕ್ಕೆ ಅನ್ನ ನೀಡುವ ರೈತರಿಗೆ ವಿಶೇಷ ಕಾರ್ಯ ಸರಕಾರ  ಜಾರಿಗೆ ತಂದಿದೆ,  ರೈತರು ಕೃಷಿ ಕಡೆಗೆ ಹೆಚ್ಚಿನ ಗಮನ ಹರಿಸಿ ಉತ್ತಮ ಕೃಷಿಕರಾಗಬೇಕೆಂದು ಸಚಿವ ಪಾಟೀಲ ನುಡಿದರು.

ಶಾಸಕ ಮಹಾಂತೇಶ ಕೌಜಲಗಿ  ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಟಣದಲ್ಲಿ  ರೈತ ಸಂಪರ್ಕ ಕೇಂದ್ರವನ್ನು ಆರಂಭಿಸಿದ್ದು ರೈತರು ಇದರ ಉಪಯೋಗ ಪಡೆದು  ಉತ್ತಮ ಕೃಷಿಯನ್ನು ಹೊಂದಬೇಕೆಂದು ನುಡಿದರು. ಕಾಡಾ ಅಧ್ಯಕ್ಷ ಡಾ, ವಿಶ್ವನಾಥ ಪಾಟೀಲ,  ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ, ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ ವೇದಿಕೆ ಮೇಲಿದ್ದರು.

 


Leave a Reply