Belagavi

ಅಂತ್ಯೋದಯ ಕಲ್ಪನೆ ಕಾರ್ಯಕ್ರಮ


ಮೂಡಲಗಿ: ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಅರಭಾವಿ ಮಂಡಲದ ಯುವ ಮೋರ್ಚಾ, ಎಸ್.ಸಿ-ಎಸ್.ಟಿ ಮೋರ್ಚಾ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಡಿಯಲ್ಲಿ ಅಂತ್ಯೋದಯ ಕಲ್ಪನೆ ಕಾರ್ಯಕ್ರಮವು ಪಟ್ಟಣ ಅಂಬೇಡ್ಕರ್ ಭವನದಲ್ಲಿ ಭವನವನ್ನು ಸ್ವಚ್ಛಗೊಳಿ ಮತ್ತು ಸಸಿ ನೆಟ್ಟು ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ವಿಮೆಯನ್ನು ಮಾಡಿಸುವುದರ ಮೂಲಕ ಮತ್ತು ಸ್ಥಳೀಯ ಚೌಡಕ್ಕಿ ಪದಗಳ ಕಲಾವಿದ ಸಾಧಕರನ್ನು ಸನ್ಮಾನಿಸಿದರು ಮೂಲಕ ಅರ್ಥಪೂರ್ಣವಾಗಿ ಅಂತ್ಯೋದಯ ಕಲ್ಪನೆ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಅಂತ್ಯೋದಯ ಕಲ್ಪನೆ ಕಾರ್ಯಕ್ರಮ ಜಿಲ್ಲಾ ಸಂಚಾಲಕ ಗುರು ಹಿರೇಮಠ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ಮಾತನಾಡಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕನಸನು ಇಂದು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿಜಿ ಅವರು ಶ್ರಮಿಸುತ್ತಿದ್ದಾರೆ ಆ ನಿಟ್ಟಿನಲ್ಲಿ ಬಿಜೆಪಿ ಎಲ್ಲ ಕಾರ್ಯಕರ್ತರು ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳು ತಲುಪಲುಪುವಂತೆ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹದೇವ ಶೆಕ್ಕಿ, ಬಿಜೆಪಿ ಮುಖಂಡ ಪ್ರಕಾಶ್ ಮಾದರ್, ಜಿಲ್ಲಾ ಎಸ್.ಸಿ-ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಜಿಲ್ಲಾ ರೈತ ಮೋರ್ಚಾ ಆನಂದ ಮೂಡಲಗಿ, ಅರಭಾವಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣಾ ದೇವರ, ಅರಬಾವಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್ ನುಗ್ಗಾನಟ್ಟಿ, ಮಹಂತೇಶ್ ಕುಡಚಿ ಮುತ್ತಪ್ಪ ಮನ್ನಾಪುರ್. ಪ್ರವೀಣ್ ಕೊಪ್ಪದ್, ರೇವಪ್ಪ ಕೋರಿಶೇಟ್ಟಿ ಖೇದಾರಿ ಭಸ್ಮೇ, ಮತ್ತಿತರು ಇದ್ದರು.


Leave a Reply