Belagavi

ದೆಹಲಿ ಸಂಸತ್ ಭವನಕ್ಕೆ “ಅನುಭವಮಂಟಪ” ಎಂದು ನಾಮಕರಣ ಮಾಡಿ ಮಠಾಧೀಶರ ಆಗ್ರಹ


ಬೆಳಗಾವಿ: ದಿಲ್ಲಿಯಲ್ಲಿ ಹೊಸದಾಗಿ £ರ್ಮಾಣವಾಗುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ’ ಎಂದು ನಾಮಕರಣ ಮಾಡಬೇಕು ಹಾಗೂ ಬೆಳಗಾವಿ ರೈಲು £ಲ್ದಾಣಕ್ಕೆ ನಾಗನೂರು ರುದ್ರಾಕ್ಷಿ ಮಠದ ಮಹಾಸ್ವಾಮೀಜಿ ಲಿಂ.ಡಾ.ಶಿವಬಸವ ಮಹಾಸ್ವಾಮೀಜಿಯವರ ಹೆಸರನ್ನು ಇಡಬೇಕು ಎಂದು ಬೆಳಗಾವಿ ಜಿಲ್ಲೆಯ ಮಠಾಧೀಶರು ಶುಕ್ರವಾರ ಮುಂಜಾನೆ ನಾಗನೂರು ಮಠದಲ್ಲಿ ಆಗ್ರಹಿಸಿದರು.
ತೋಂಟದಾರ್ಯ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಮಠಾಧೀಶರು ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಶ್ರೀ ಅಶೋಕ ಚಂದರಗಿ ಅವರು ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮಹೇಶ ಹಿರೇಮಠರ ಮೂಲಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾ£ ಶ್ರೀ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.


Leave a Reply