Koppal

ಮಹಾತ್ಮಾ ಗಾಂಧೀಜಿಯವರ ಸರಳ, ಅಹಿಂಸಾ ತತ್ವ ನಮ್ಮೇಲ್ಲರಿಗೂ ಆದರ್ಶ: ಬಿ.ಆರ್. ಬಡಿಗೇರ್


ಗಂಗಾವತಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಸರಳ ಮತ್ತು ಅಹಿಂಸಾ ತತ್ವದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಅವರ ಸರಳ ಜೀವನ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ಉಪಾಧ್ಯಕ್ಷ ಬಿ.ಆರ್. ಬಡಿಗೇರ್ ಹೇಳಿದರು.
ವಡ್ಡರಹಟ್ಟಿ ಗ್ರಾಮದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಕಾರ್ಯಕ್ರಮದ ನಿಮಿತ್ಯ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರ್ವ ಸದಸ್ಯರು ಪುಷ್ಟಾರ್ಚನೆ ಮಾಡಿದ ನಂತರ ಮಾತನಾಡಿದ ಅವರು, ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟೀಷರ ಸಂಕೋಲೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು, ಅವರ ವಿಚಾರಧಾರೆಗಳು, ಆದರ್ಶ ನಮಗೆ ಮಾರ್ಗದರ್ಶನ ನೀಡುತ್ತವೆ ಎಂದರು.

ಖಜಾಂಚಿ ವಿರುಪಾಕ್ಷಾಚಾರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು, ಕೇವಲ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಮಹಾನ್ ಚಿಂತಕರು ಕೂಡ. ಅವರ ವಿಚಾರಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸೋಮನಾಥ ಕಾರಪೆಂಟರ್, ಸಮಿತಿಯ ಕಾರ್ಯದರ್ಶಿ ಮಹೇಶ ಪತ್ತಾರ ಆರ್ಹಾಳ, ನಾಗರಾಜ ಆಚಾರ್, ನಾಗಲಿಂಗ ಪತ್ತಾರ ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply