Belagavi

ಸಮುದಾಯಗಳ ಅಭಿವೃದ್ದಿಯಿಂದ ಉನ್ನತ ಸಮಾಜ ನಿರ್ಮಾಣ :ಶಾಸಕ ಮಹಾಂತೇಶ ದೊಡಗೌಡ್ರ


ಸಂಪಗಾAವ .ಅ.೨ : ಸಮಾಜದಲ್ಲಿನ ಸಮುದಾಯಗಳು ಅಭಿವೃದ್ದಿ ಹೊಂದಿದರೆ ಉನ್ನತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.
ಬೈಲಹೊಂಗಲ ತಾಲೂಕಿನ ಸಂಪಗಾAವ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಭಗವಾನ ಶ್ರೀ ೧೦೦೮ ಶಾಂತಿಸಾಗರ ದಿಗಂಬರ ಜೈನ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಸಮುದಾಯಗಳು ಅಭಿವೃದ್ದಿ ಪಥದಲ್ಲಿ ಸಾಗಬೇಕು. ಸಮುದಾಯಗಳ ಅಭಿವೃದ್ದಿಯಿಂದ ಸಮಾಜದ ಅಭಿವೃದ್ದಿಯಾಗುತ್ತದೆ. ಈ ನಿಟ್ಟಿನಲ್ಲಿ ಸಂಪಗಾAವ ಗ್ರಾಮದ ಜೈನ ಸಮಾಜ ಒಗ್ಗಟ್ಟಿನಿಂದ ಒಂದು ಸುಂದರವಾದ ಭವನವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡುತ್ತಿರುವುದು ಸಮಾಜದ ಅಭಿವೃದ್ದಿಯ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಇತರ ಸಮಾಜಗಳು ಕಾರ್ಯ ಕೈಗೊಳ್ಳಬೇಕೆಂದು ಅವರು ಹೇಳಿದರು.
ಸರಕಾರದ ನೆರವು ಮತ್ತು ದಾನಿಗಳ ನೆರವಿನಿಂದ ಇಂದು ಭವ್ಯವಾದ ಭವನ ನಿರ್ಮಾಣವಾಗಿದೆ. ದಾನಿಗಳು ಸದಾ ಮುಂದೆ ಬಂದು ದಾನ ಮಾಡುತ್ತಾರೆ. ಅವರು ನೀಡಿದ ದಾನ ಸದುಪಯೋಗವಾಗಿ ಸಮಾಜಮುಖಿ ಕಾರ್ಯಗಳು ನಡೆಯಬೇಕು. ತಮ್ಮ ಕ್ಷೇತ್ರದಲ್ಲಿ ಯಾವುದೇ ಸಮಾಜ ಮುಖಿ ಅಭಿವೃದ್ದಿ ಕಾರ್ಯಗಳು ನಡೆದರೆ ಅದಕ್ಕೆ ಸಹಾಯ ಸಹಕಾರ ನೀಡಲು ಸದಾ ಸಿದ್ದ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಮಾತನಾಡಿ, ಜೈನ ಸಮಾಜ ಸದಾ ಅಭಿವೃದ್ದಿ ಪಥದಲ್ಲಿ ಸಾಗುತ್ತ ಬಂದಿದೆ. ಸಮಾಜ ಚಿಕ್ಕದಾದರೂ ಸಹ ಎಲ್ಲ ಸಮಾಜದವರೊಂದಿಗೆ ಬೆರೆತು ಕೂಡಿ ಬಾಳುವ ಸಮಾಜವಾಗಿದೆ. ಸಮಾಜವು ಸಂಪಗಾAವ ಗ್ರಾಮದಲ್ಲಿ ಇಂದು ಭವನ ಉದ್ಘಾಟಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ದಾನಗಳ ಸಹಾಯದಿಂದ ಈ ಕಾರ್ಯ ಪೂರ್ಣಗೊಂಡಿದೆ. ಇಂದು ಆ ದಾನಿಗಳನ್ನು ಗೌರವಿಸಿ ಸತ್ಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಒಳ್ಳೆಯ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ಹೇಳಿದ ಅವರು, ಗ್ರಾಮದಲ್ಲಿನ ಎಲ್ಲ ಸಮಾಜ ಬಾಂಧವರು ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಕಟ್ಟಿದ ಭವನ ಎಲ್ಲ ಸಮಾಜಗಳ ಉಪಯೋಗಕ್ಕೆ ಬರಲಿ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಭಯ ಅವಲಕ್ಕಿ ಅವರು, ಈ ಭವನ ನಿರ್ಮಾಣದ ಸಂದರ್ಭದಲ್ಲಿ ಅನೇಕ ಅಡೆತಡೆಗಳು ಬಂದರು ಸಹ ಸಂಪಗಾAವ ಗ್ರಾಮದ ಗ್ರಾಮಸ್ಥರು ಧೈರ್ಯದಿಂದ ಈ ಭವನ ನಿರ್ಮಾಣಕ್ಕೆ ಮುಂದಾದರು.ಅದಲ್ಲದೇ ಮಾಜಿ ಶಾಸಕ ಸಂಜಯ ಪಾಟೀಲ ಅವರು ತಮ್ಮ ಅಧಿಕಾರವಧಿಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಆರ್ಥಿಕ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಜೊತೆಗೆ ಸಮಾಜದ ಅನೇಕ ಹಿರಿಯರು ತಮ್ಮ ಕೈಲಾದ ದಾನ ನೀಡಿ ಈ ಭವನ ನಿರ್ಮಾಣಕ್ಕೆ ಸಹಾತ ನೀಡಿದ್ದು, ಅವರಿಗೆಲ್ಲ ಸಂಪಗಾAವ ಜೈನ ಸಮಾಜ ಚಿರಋಣಿಯಾಗಿದೆ ಎಂದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ರೋಹಿಣಿ ಪಾಟೀಲ ಅವರು ಮಾತನಾಡಿದರು. ಭವನ ನಿರ್ಮಾಣಕ್ಕೆ ನೆರವು ನೀಡಿದ ರಾಜು ಹನಮಣ್ಣವರ, ದೀಪಕ ಧಡೂತಿ, ರಾಜೇಂದ್ರ ಜಕ್ಕನ್ನವರ, ಅಶೋಕ ಬೆಂಢಿಗೇರಿ, ಜಿತೇಂದ್ರ ಅಗಸಿಮನಿ, ಭರತ ಬಾಗಿ, ರಾಜು ದೊಡ್ಡಣ್ಣವರ, ಶಾಂತಿನಾಥ ಕಾಂತೆ, ಶ್ರೀಧರ ಪತ್ರಾವಳಿ, ಉದ್ಯಮಿ ಗೋಪಾಲ ಜಿನಗೌಡ , ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಮೇಲೆ ಸಂಪಗಾAವ ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಬುಲಾಕೆ, ವಿಕ್ರಮ ಇನಾಮದಾರ, ಅಶೋಕ ಜೈನ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರವೀಂದ್ರ ಅಗಸಿಮನಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಸಾದ ಪಾಟೀಲ ಭವನ ನಿರ್ಮಾಣ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಭವನ ನಿರ್ಮಾಣಕ್ಕಾಗಿ ವಿಶೇಷ ಶ್ರಮ ವಹಿಸಿದ ಅಭಯ ಅವಲಕ್ಕಿ ಮತ್ತು ಬಾಬು ಅಕ್ಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದ್ಮಾಕರ ಖತಗಲಿ, ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ಪಾಟೀಲ ವಂದಿಸಿದರು.


Leave a Reply