Koppal

ಭಾರತೀಯ ಜನತಾ ಪಾರ್ಟಿ ಕುಷ್ಟಗಿ ಮಂಡಲದವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ


ಕುಷ್ಟಗಿ:  ಭಾರತೀಯ ಜನತಾ ಪಾರ್ಟಿ ಕುಷ್ಟಗಿ ಮಂಡಲದವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಡಿಯಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲಬಹೂದ್ದೂರ ಶಾಸ್ತ್ರೀಯವರ ಜನ್ಮ ದಿನದ ಪ್ರಯುಕ್ತ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು ಈ ಸಂಧಭ೯ದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕರಾದ
ದೊಡ್ಡನಗೌಡ. ಎಚ್.ಪಾಟೀಲ ಅವರು ಮಾತನಾಡಿ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್‌ ನಡ್ಡಾ ಜೀ ಅವರ ಆದೇಶ ಮೇರೆಗೆ ರಾಷ್ಟ್ರ ಮತ್ತು ರಾಜ್ಯದಾದ್ಯಂತ ಎಲ್ಲಾ ಮಂಡಲಗಳಲ್ಲಿ ಸ್ವದೇಶಿ ವಸ್ತುಗಳ ಖರೀದಿಗೆ ಉತ್ತೇಜಿಸುವ ಕಾಯ೯ ನಮ್ಮ ನಿಮ್ಮೆಲ್ಲರಿಂದ ಆಗಲಿ ಮುಂದಿನ ಪೀಳಿಗೆಗೆ ನಾವುಗಳು ಈ ಇಬ್ಬರ ಮಹಾತ್ಮರ ಕುರಿತಾದ ಸಂದೇಶವನ್ನು ಸಾರುವ ಮೂಲಕ ಅವರ ಹೆಸರನ್ನು ಉಳಿಸಿ ಬೆಳೆಸಿಕೊಂಡು ಸಾಗೋಣ ಎಂದು ಹೇಳಿದರು.

ನಂತರ ಪಾದಯಾತ್ರೆ ಮೂಲಕ ಖಾದಿ ಭಂಡಾರ ಅಂಗಡಿಗೆ ಭೇಟಿ ನೀಡಿ ಖಾದಿ ಖರೀದಿ ಮಾಡಿದರು ಮತ್ತು ಚಮ೯ದಾರ ವ್ಯಾಪಾರಿಗಳಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯರಾದ ಕೆ.ಮಹೇಶ , ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡಗೇರಿ ಗಾಂಧೀಜಿ ಜಯಂತಿ ಆಚರಣೆ ಜಿಲ್ಲಾ ಸಹ ಸಂಚಾಲಕ ಸಯ್ಯದ್ ಅಮೀನುದ್ದೀನ್ ಮುಲ್ಲಾ, ಪುರಸಭೆ ಸದಸ್ಯರುಗಳಾದ ಜೆ. ಜಿ.ಆಚಾಯ೯ ಮಹಾಂತೇಶ್ ಕಲ್ಲಭಾವಿ , ರಾಜೇಶ ಪತ್ತಾರ, ಕಲ್ಲೇಶ ತಾಳದ , ಭಾಜಪ ಮುಖಂಡರಾದ ವಿಜಯಕುಮಾರ್ ಹಿರೇಮಠ ,ಮಲ್ಲಣ್ಣ ಪಲ್ಲೇದ, ವೆಂಕಟೇಶ ಮಠದ, ಶರಣಪ್ಪ ಚೂರಿ, ಈರಣ್ಣ ಸೊಬರದ, ಭೀಮಸೇನ ಹಂಜಕ್ಕಿ , ಸುರೇಶ ಸೇಬಿನಕಟ್ಟಿ , ಮಂಜುನಾಥ ಅಬ್ಬಿಗೇರಿ, ರವಿ ಕೊಳೂರ, ಪ್ರಶಾಂತ ಗುಜ್ಜಲ್, ಮುಂತಾದವರು

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply