Koppal

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಯಲಬುರ್ಗಾ ತಾಲೂಕಾ ಘಟಕದ ಅಧ್ಯಕ್ಷ ಹುದ್ದೆಗೆ ನೇಮಕ


ಶ್ರೀ ಬಾಳಪ್ಪ ಎಸ್ ವಿರಾಪುರ ಇವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಯಲಬುರ್ಗಾ ತಾಲೂಕಾ ಘಟಕದ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿದ್ದು, ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿ ಸಕ್ರಿಯವಾಗಿ ಶರಣ ಸಾಹಿತ್ಯ ಪರಿಷತಿನ ಸಂಘಟನೆಯಲ್ಲಿ ತೊಡಗಿಕೊಂಡು ಶರಣರ ಚಿಂತನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ಕ್ರಿಯಾಶೀಲರಾಗಬೇಕೆಂದು ವಿನಂತಿ. ಶರಣ ಸಾಹಿತ್ಯ ಪರಿಷತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಹು ದೊಡ್ಡ ಸಂಘಟನೆಯಾಗಿದ್ದು, ಮೈಸೂರಿನ ಸುತ್ತೂರು ಮಠದ ಶ್ರೀಗಳು ಇದರ ಗೌರವಧ್ಯಕ್ಷರಾಗಿದ್ದು, ರಾಜ್ಯಾಧ್ಯಕ್ಷರಾಗಿ ಹಿರಿಯ ಚಿಂತಕರಾದ ಗೋ. ರಾ. ಚನ್ನಬಸಪ್ಪರವರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶರಣ ಸಾಹಿತ್ಯದ ಮೂಲಕ ಶರಣರ ಜೀವನ, ಶರಣ ತತ್ವ, ಶರಣರ ಚಿಂತನೆ, ಶರಣರ ಸಮಾಜಮುಖಿ ಬದುಕು, ಜೀವನ ಆಚಾರ ವಿಚಾರಗಳನ್ನು ತಲುಪಿಸುವ ನಿಟ್ಟಿನಲ್ಲಿ ಯಲಬುರ್ಗಾ ತಾಲೂಕಿನಾದ್ಯಂತ ಸಂಚರಿಸಿ ಶರಣರ ವಿಚಾರಗಳನ್ನು ತಲುಪಿಸಬೇಕಾಗಿ ವಿನಂತಿ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ. ಎಸ್. ಗೋನಾಳರವರು ನೇಮಕ ಆದೇಶ ನೀಡಿರುತ್ತಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply