Belagavi

ರಾಜ್ಯ ರಾಜಕಾರಣಿಗಳಿಗೆ ಧೈರ್ಯವಿದ್ದರೆ ಸದಾಶಿವ ಆಯೋಗ ಮಂಡಿಸಲಿ: ಎ.ನಾರಾಯಣಸ್ವಾಮಿ


ಬೆಳಗಾವಿ: ಮಾದಿಗ ಸಮಾಜದ ಮೇಲೆ ರಾಜ್ಯ ನಾಯಕರುಗಳಿಗೆ ನಿಜವಾದ ಕಾಳಜಿ ಇದ್ದರೆ ಸದಾಶಿವ ಆಯೋಗವನ್ನು ಜಾರಿಗೆ ತರಲಿ, ಮಾದಿಗರ ಅಭಿವೃದ್ಧಿಗೆ ಶ್ರಮಿಸಲಿ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ  ಜ್ಯೋತಿ ಬೆಳಗಾಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದಲ್ಲಿರುವ ಮೇಲು ಕೀಳುಗಳನ್ನು ತೊಡೆದು ಹಾಕಲು ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹತ್ತು ವರ್ಷದ ಮಿಸಲಾತಿಯನ್ನು ನೀಡಿದ್ದರು. ಆದರೆ ಮಿಸಲಾತಿ ನೀಡಿ 75 ವರ್ಷ ಕಳೆದರೂ ಮಾದಿಗ ಸಮುದಾಯದ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಟ್ರಸ್ಟಗಳು, ಎನ್.ಜಿ.ಓ ಕೋ ಆಫರೇಟಿವ್ ಸೊಸೈಟಿಗಳಿಗೆ ಸಾಕಷ್ಟು ಹಣ ಹುಡಿಕೆ ಮಾಡಲಾಗುತ್ತಿದೆ ಆದರೂ ಮಾದಿಗ ಸಮುದಾಯ ಈ ರಂಗದಲ್ಲಿಯೂ ಕೂಡ ಬೆಳೆಯದಿರುವುದು ದುರ್ದೈವದ ಸಂಗತಿ. ರಾಜ್ಯದಲ್ಲಿರು ಎಲ್ಲ ಸಬ್ಸಿಡಿಗಳು ಬಲಿಷ್ಟರ ಮನೆಗಳಿಗೆ ಸೇರುತ್ತಿದೆ ಅದನ್ನ ಯೋಚಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು ಅದು ಕಾರ್ಯಾಗಾರಗಳಿಂದ ಮಾತ್ರ ಸಾಧಿಸಲು ಸಾಧ್ಯ ಎಂದರು.ರಾಜ್ಯದ ಪ್ರಜ್ಞಾವಂತ ರಾಜಕಾರಣಿಗಳಿಗೆ ಧೈರ್ಯವಿದ್ದರೆ ಅಧಿವೇಶನದಲ್ಲಿ ಮಂಡನೆ ಮಾಡಲಿ ಎಂದು ಸವಾಲೆಸೆದರು.

ಶಾಸಕ ದುರ್ಯೋಧನ ಐಹೊಳೆ ಅವರು ಮಾತನಾಡಿ ಮಾದಿಗ ಸಮುದಾಯದ ಅಭಿವೃದ್ಧಿ ಮಾಡಲು ಸದಾಶಿವ ಆಯೋಗ ವರದಿ ಜಾರಿಯಾಗಬೇಕು. ಅದನ್ನು ಜಾರಿ ಮಾಡುವ ಹೊಣೆ ನಿಮ್ಮದು ಎಂದು ನಾರಾಯಣ ಸ್ವಾಮಿ ಅವರಿಗೆ ಮನವಿ ಮಾಡಿದರು. ಕಳೆದ 25 ವರ್ಷಗಳಿಂದ ಈ ಹೋರಾಟ ನಡೆಯುತ್ತಲೇ ಬಂದಿದ್ದು ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರ ಬಲಿಧಾನ ಸಪಲವಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ  ರಾಜೇಂದ ಪ್ರಶಾಂತರಾವ್,  ಯಲ್ಲಪ್ಪಾ ಹುದಲಿ, ಮಹಾವೀರ ಐಹೊಳೆ, ಸಿದ್ದು ಮೇತ್ರಿ, ಬಾಬುಸಾಬ ಕೆಂಚನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply