Uncategorized

ಬೆಳಗಾವಿಯಲ್ಲಿ ನೇಣಿಗೆ ಶರಣಾದ ಮೆಡಿಕಲ್ ಕಾಲೇಜು ವಿದ್ಯಾರ್ಥಿ


ಬೆಳಗಾವಿ:  ಖಾಸಗಿ ಮೆಡಿಕಲ್  ಕಾಲೇಜನಲ್ಲಿ ಫಾರ್ಮಸಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದ  21 ವರ್ಷದ ಯುವಕನೋರ್ವ,  ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯ  ನೆಹರು ನಗರದಲ್ಲಿ ಬೆಳಗಿನ ಜಾವ ನಡೆದಿದೆ.

ಕೋಲ್ಹಾಪುರದ ಇಂಚಲಕರಂಜಿ  ಭರತ ಪಾಟೀಲ್  (21) ಮೃತ ಯುವಕನಾಗಿದ್ದು  ಇಲ್ಲಿನ ಖಾಸಗಿ ಮೆಡಿಕಲ್  ಕಾಲೇಜನಲ್ಲಿ ಫಾರ್ಮಸಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದ ಆರ್ಥಿಕ ಸಂಕಷ್ಟ ಹಾಗೂ ಪರೀಕ್ಷೆಗೆ ಹೆದರಿ ಡೆತ್ ನೋಟ್ ಬರೆದಿಟ್ಟು ಸೋಮವಾರ ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾನೆ.

ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಯುವಕ ಕಾಲೇಜು ಬಿಡುವಿನ ವೇಳೆಯಲ್ಲಿ ಹೋಟೆಲ್ ನಲ್ಲಿ ಕೆಲಸಕ್ಕೂ ಹೋಗುತ್ತಿದ್ದ ಎನ್ನಲಾಗಿದ್ದು ಎಪಿಎಮ್ ಸಿ ಪೊಲೀಸ್ ಠಾಣೆಯ ಪಿಎಸ್ ಐ ಮಂಜುನಾಥ ಭಜಂತ್ರಿ ಅವರು ಸ್ಥಳಕ್ಕೆ ಆಗಮಿಸಿ, ಪರೀಶಿಲನೆ ನಡೆಸಿದ್ದಾರೆ.

ಇತ್ತೀಚೆಗೆ ನಡೆದ  ಜುಡೋ ನ್ಯಾಷನಲ್ ಕಿಕ್ ಬಾಕ್ಸಿಂಗ್ ನಲ್ಲಿ ಭಾಗವಹಿಸಿ ರಾಜ್ಯವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ ಯುವಕ,  ಕಾಲೇಜನಲ್ಲಿ ಉತ್ತಮ ಚಟುವಟಿಕೆಗಳನ್ನು ಹೊಂದಿದ್ದನು. ಮುಂದಿನ ತಿಂಗಳನಲ್ಲಿ ಪರೀಕ್ಷೆಗಳಿದ್ದು ಅದಕ್ಕೆ ಹೆದರಿ ಮತ್ತು ಮನೆಯಲ್ಲಿನ ಸಮಸ್ಯೆಗೆ ಮನನೊಂದು ನೇಣಿಗೆ ಕೊರೊಳೊಡ್ಡಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.


Leave a Reply