vijayapur

ಪ್ರತಿಷ್ಟಿತ ಶಾಲೆಗಳಲ್ಲಿ ೬ ನೇ ತರಗತಿಗೆ ಬಾಲಕ, ಬಾಲಕಿಯರಿಗೆ ಅರ್ಜಿ ಆಹ್ವಾನ


ವಿಜಯಪುರ : ಅ.೪. : ೨೦೨೧-೨೨ನೇ ಶೈಕ್ಷಣಿಕ ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲು ಪ್ರತಿಷ್ಟಿತ ಶಾಲೆಗಳಲ್ಲಿ ೬ನೇ ತರಗತಿಗೆ ಬಾಲಕ, ಬಾಲಕಿಯರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಕೆಳಕಂಡ ಪ್ರತಿಷ್ಟಿತ ಶಾಲೆಗಳಲ್ಲಿ ೬ ನೇ ತರಗತಿಗೆ ಅ. ೧೧ರೊಳಗಾಗಿ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ನಿಗಧಿತ ಅರ್ಜಿಯೊಂದಿಗೆ ಸಲ್ಲಿಸಬೇಕು.
ಶಾಲೆಗಳು : ಮಾನಸ ಗಂಗೋತ್ರಿ ಹೈಯರ್ ಪ್ರೈಮರಿ ಮತ್ತು ಹೈಸ್ಕೂಲ್ (ಕನ್ನಡ ಮತ್ತು ಆಂಗ್ಲ ಮಾಧ್ಯಮ)ತಿಡಗುಂದಿ, ತಾ:ವಿಜಯಪುರ, ಶ್ರೀ.ಸತ್ಯಸಾಯಿಬಾಬಾ ಹೈಯರ್ ಪ್ರೈಮರಿ ಸ್ಕೂಲ್ & ಹೈಸ್ಕೂಲ್, ಹಡಗಲಿ ತಾಂಡಾ ತಾ:ವಿಜಯಪುರ, ಶ್ರೀ.ವೆಂಕಟೇಶ್ವರ ಪ್ರೈಮರಿ & ಹೈಸ್ಕೂಲ್, ದೇವರ ಹಿಪ್ಪರಗಿ, ತಾ:ಸಿಂದಗಿ, ಶ್ರೀ.ಸರಸ್ವತಿ ಹೈಯರ್ ಪ್ರೈಮರಿ ಸ್ಕೂಲ್, ಬರಟಗಿ ತಾ:ವಿಜಯಪುರ, ಶ್ರೀ.ವಿವೇಕಾನಂದ ಪೈಮರಿ & ಹೈಸ್ಕೂಲ್, ಮನಗೂಳಿ ತಾ: ಬಸವನ ಬಾಗೇವಾಡಿ, ಜ್ಞಾನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್ ಎನ್.ಎಚ್-೧೩ ಅರಕೇರಿ ತಾ:ಜಿ:ವಿಜಯಪುರ, ವಿಕಾಸ ಕನ್ನಡ ಪ್ರಾಥಮಿಕ & ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜೈ ಕರ್ನಾಟಕ ಕಾಲೋನಿ, ಸಿಂದಗಿ ನಾಕಾ, ವಿಜಯಪುರ ತಾ:ವಿಜಯಪುರ, ಶ್ರೀ.ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆ ಚವಡಿಹಾಳ ತಾ:ಇಂಡಿ, ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೊರ್ತಿ ತಾ:ಇಂಡಿ ಆಗಿವೆ ಎಂದು ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply