Uncategorized

ಬಿ.ಎಲ್.ಓ ಕೆಲಸದಿಂದ ಮುಕ್ತಿಗೊಳಿಸುವಂತೆ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ


ಬೆಳಗಾವಿ: ಬಿ.ಎಲ್.ಓ ಕೆಲಸದಿಂದ ಮುಕ್ತಗೊಳಸಬೇಕು ಇಲ್ಲದಿದ್ದರೆ ಅವಶ್ಯವಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಲು.

ಸೋಮವಾರ ಬೆಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಬಿ.ಎಲ್.ಓ ಕೆಲಸ ಅಂಗನವಾಡಿ ಕಾರ್ಯಕರ್ತರಿಗೆ ಹೊರೆಯಾಗುತ್ತಿದ್ದು ಅದರಿಂದ ನಮ್ಮನ್ನು ಮುಕ್ತಗೊಳಿಸಿ ಇಲ್ಲವೆ ಅವಶ್ಯವಿರುವ ಬೇಡಿಕೆಗಳಾದ ಪ್ರತಿ ವರ್ಷ 20 ಸಾವೀರ ವೇತನ, ಚುನಾವಣಾ ಆಯೋಗದ ಸಭೆಗಳಾದಾಗ ಟಿ.ಎ ಡಿ.ಎ ಕೊಡಬೇಕು, ಚುನಾವಣಾ ದಿನ ಉಪಹಾರ ಮತ್ತು ಚುನಾವಣಾ ದಿನದ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.

ಚುನಾವಣಾ ವೇಳೆ ಬಿ.ಎಲ್.ಓ ಗಳಿಗೆ ಮೂಬೈಲ್ ಮತ್ತು ನೆಟ್ ಪ್ಯಾಕ್ ಹಾಕಿಸಬೇಕು, ರಜೆಯ ದಿನ ಕೆಲಸ ಮಾಡಿದಾಗ ಭತ್ಯೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಗೇಶ ಸಾತೇರಿ, ವಾಯ್.ಬಿ.ಶೀಗಿಹಳ್ಳಿ, ಮೀನಾಕ್ಷಿ ಕೊಟಗಿ, ಸುಜಾತಾ ಬೆಳಗಾವಕರ ಸೇರಿದಂತೆ ಹಲವಾರು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಉಪಸ್ಥಿತರಿದ್ದರು.


Leave a Reply