Belagavi

ಸಂಜಯ ಪಾಟೀಲ್ ಹೇಳಿಕೆ ಖಂಡನೀಯ: ಬಸವರಾಜ ಪಾಟೀಲ


ಮೂಡಲಗಿ: ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ, ಸಂಜಯ ಪಾಟೀಲ, ಕಾಂಗ್ರೆಸ್ ಶಾಸಕಿಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆ ಖಂಡನೀಯ,ಈ ರೀತಿ ಹೇಳಿಕೆ ಯಾವುದೇ ಭಾರತೀಯ ಹೆಣ್ಣುಮಕ್ಕಳ ಪರವಾಗಿ ನೀಡುವುದು ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವಂತಾಗಿದೆ ಎಂದು ಮೂಡಲಗಿಯ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು
ಪಟ್ಟಣದ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಈ ರೀತಿ ಹೇಳಿಕೆಯನ್ನು ನಾವು ಯಾವುದೇ ನಮ್ಮ ಭಾರತೀಯ ಹೆಣ್ಣು ಮಕ್ಕಳ ಪರವಾಗಿ ನೀಡುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ,ಆದ್ದರಿAದ ಈ ಕೂಡಲೇ ಸಂಜಯ ಪಾಟೀಲ ಅವರು ತಮ್ಮ ಹೇಳಿಕೆಯನ್ನು ಹಿಂಪದೆಡೆದು ಕ್ಷಮೆ ಕೇಳಬೇಕು,ಇದೆ ರೀತಿ ಮುಂದು ವರೆದರೆ ಮುಂಬರುವ ದಿನಗಳಲ್ಲಿ ನಮ್ಮ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಗ್ರಹಿಸಿದರು
ಈ ಸಂಧರ್ಭದಲ್ಲಿ ಮೇಲಪ್ಪಾ ಅಂಗಡಿ, ಹೊಳೆಪ್ಪಾ ಶಿವಾಪೂರ ,ಈಶ್ವರ ಢವಳೇಶ್ವರ, ಚನ್ನಬಸು ಬಡ್ಡಿ ಉಪಸ್ಥಿತರಿದ್ದರು.


Leave a Reply