Belagavi

ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರದ ವಿರುದ್ಧ ರೈತ ಪ್ರತಿಭಟನೆ


ಬೆಳಗಾವಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು ಅವುಗಳನ್ನು ಕೂಡಲೆ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು‌.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದ ಕೃಷಿಕಾಯ್ದೆ ಯೋಜನೆಗಳು ರೈತರಿಗೆ ಮಾರಕವಾಗಿವೆ. ಇವುಗಳಿಂದ ರೈತರಿಗೆ ಉಪಯೋಗ ಆಗುವುದಕ್ಕಿಂತ ಹೆಚ್ಚು ಸಂಕಷ್ಟಕ್ಕೆ ಸಿಲುಕಿಸುತ್ತವೆ ಆದ್ದರಿಂದ ಅವುಗಳನ್ನ ಕೂಡಲೆ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಉತ್ತರ ಪ್ರದೇಶದಲ್ಲಿ ಧರಣಿ ನಿರತ ರೈತರ ಮೇಲೆ ಮಂತ್ರಿ ಪುತ್ರ ಕಾರು ಚಲಾಯಿಸಿ ನಾಲ್ಕು ಜನ ರೈತರ ಸಾವಿಗೆ ಕಾರಣವಾಗಿದ್ದು ಮಾನವಕುಲಕ್ಕೆ ಕಳಂಕ ತರುವ ಕೃತ್ಯವಾಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ‌ಸುಭಾಶ ಧಾಯಗೊಂಡೆ, ಚಂದ್ರು ರಾಜಾಯಿ, ಬಸವಂತ ಕುರಾಡೆ, ರಾಜು ಕಾಗನೇಕರ, ಮಾರುತಿ ಕಡೇಮನಿ, ನಾಮದೇವ ದುಡುಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply