Belagavi

ವಡೇರಹಟ್ಟಿ: ರಾಷ್ತಿçà ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ


ಮೂಡಲಗಿ: ತಾಲೂಕಿನ ವಡೇರಹಟ್ಟಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಎನ್.ಎನ್.ಎಸ್ ಘಟಕದ ಆಶ್ರಯದಲ್ಲಿ ರಾಷ್ತಿçà ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆಯ್.ಬಾಗೋಜಿ ಸಮಾರಂಭದ ಅಧ್ಯಕ್ಷತೆವಹಿಸಿ ಸಸಿಗೆ ನಿರು ಉನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆನಿಡಿ ಮಾತನಾಡಿ, ರಾಷ್ತಿçà ಸೇವಾ ಯೋಜನೆ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿವದರೊಂದಿಗೆ ನಿಸ್ವಾರ್ಥ ಸೇವೆಯನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯತಿಥಿಗಳಾಗಿದ ನಿವೃತ್ತ ಉಪನ್ಯಾಸಕ ಜೆ.ಎ.ದರೂರ ಮಾತನಾಡಿ, ಎನ್.ಎನ್.ಎಸ್ ಶಿಬಿರದಿಂದ ಪರಿಸರ ಸಂರಕ್ಷಣಾ ನಿರ್ವಹಣಾ ನಿಯಮಗಳ ನಿರ್ವಹಣಾ ಜವಾಬ್ದಾರಿ ಬಗ್ಗೆ ತಿಳಿಸಿದರು.
ಉಪನ್ಯಾಸಕ ವಿ.ಬಿ.ಜೋಡಹಟ್ಟಿ ಅವರು “ನನಗಲ್ಲ ನಿನಗೆ” ಎಂಬ ಎನ್.ಎಸ್.ಎಸ್ ಧ್ಯೇಯವಾಕ್ಯವನ್ನು ತಾಯಿ ಮತ್ತು ಮಗುವಿನ ಕಥೆಯ ಉದಾಹರಣೆಯೊಂದಿಗೆ ವಿವರಿಸಿದರು.
ಮಹಾವಿದ್ಯಾಲಯದ ಎನ್.ಎಸ್.ಎಸ್ ಯೋಜನಾಧಿಕಾರಿ ಕೆ.ಬಿ.ಬೆಳಗಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಸಮಾರಂಭದಲ್ಲಿ ಉಪನ್ಯಾಸಕರಾದ ಎಲ್.ಎಸ್.ವಾರೆಪ್ಪಗೋಳ, ವಾಯ್.ಎಲ್.ಶೇಖರಗೋಳ, ಕೆ.ಎಮ್.ಉಪ್ಪಾರ ಮತ್ತು ಎಸ್.ಎನ್.ತಿಗಡಿ ಮತ್ತಿತರಿದ್ದರು. ಶಿವಲಿಲಾ ಕುರಿ ನಿರೂಪಿಸಿದರು. ಕುಮಾರ ಅಂಕಲಗಿ ವಂದಿಸಿದರು.


Leave a Reply