Belagavi

ಜೊಲ್ಲೆ ದಂಪತಿಗಳು ಸಾವಿರಾರೂ ಜನರಿಗೆ ಉದ್ಯೋಗ ಕಲ್ಪಿಸಿದಾರೆ: ಕತ್ತಿ


ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿನ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಸೊಸೈಟಿಯ ಶಾಖೆಯ ಸಿಬ್ಬಂದಿಗೆ ಶೇ.೪೪ರಷ್ಟು ವೇತನ ಹೆಚ್ಚಳ ಮಾಡಿರುವ ಪ್ರಮಾಣ ಪತ್ರ ವಿತರನಾ ಕಾರ್ಯ ಜರುಗಿತು.
ಪ್ರಮಾಣ ಪತ್ರ ವಿತರಿಸಿದ ಯಾದವಾಡ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸೋಮಶೇಖರ ಕತ್ತಿ ಮಾತನಾಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನೆರವಾಗಿ ಸಾವಿರಾರೂ ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರವಾಹ ಮತ್ತು ಕೊರೋನಾ ಕಷ್ಟದ ಸಮಯದಲ್ಲಿಯೂ ಕೂಡಾ ಜನಸ್ನೇಹಿ ಕಾರ್ಯ ಮಾಡುತ್ತದಾರೆ ಎಂದರು.
ಈ ಸಂದರ್ಭದಲ್ಲಿ ಯಾದವಾಡ ಸಲಹಾ ಸಮಿತಿಯ ಸದಸ್ಯರಾದ ಶಿವನಗೌಡ ಪಾಟೀಲ, ಬಸಲಿಂಗಪ್ಪ ಢವಳೇಶ್ವರ, ಬಸಪ್ಪ ಜಾಧವ, ಸಿದ್ಧಪ್ಪ ಪೂಜೇರಿ, ಶಾಖಾ ವ್ಯವಸ್ಥಾಪಕ ಮಹಾಂತೇಶ ಕುರಬೇಟ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರಿದ್ದರು.


Leave a Reply