Belagavi

ಮಹಾನಾಯಕ ಡಾ.ಬಿರ್ ಅಂಬೇಡ್ಕರ್ ದಾರಾವಾಹಿಯಲ್ಲಿ ತಪ್ಪು ಮಾಹಿತಿ ಬಿತ್ತರಿಸುವುದರ ವಿರುದ್ಧ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ


ಬೆಳಗಾವಿ: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ ದಾರಾವಾಹಿಯಲ್ಲಿ ತಪ್ಪು ಮಾಹಿತಿ ಬಿತ್ತರಿಸುವುದರ ಮೂಲಕ ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡಲಾಗುತ್ತಿದೆ ಅದರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಂಚಿತ ಬಹುಜನ ಅಘಾಡಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ವಾರ್ತಾ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಅವರು ಡಾ.ಬಿ.ಆರ್ ಅಂಬೇಡ್ಕರ್ ದಾರಾವಾಹಿಯ 214ನೇ ಭಾಗದಲ್ಲಿ ರಮಾಯಿಯವರು ತಮ್ಮ ಕುಟುಂಬ ನಿರ್ವಹಣೆಗಾಗಿ ಚಪ್ಪಲಿ ಹೊಲೆಯುವ ದೃಶ್ಯವನ್ನು ಬಿತ್ತರಿಸಲಾಗಿದೆ. ಆದರೆ ಇತಿಹಾಸದಲ್ಲಿ ಇದರ ಬಗ್ಗೆ ಎಲ್ಲಿಯೂ ದಾಖಲೆಗಳಿಲ್ಲ. ಖಾಸಗಿ ವಾಹಿನಿಯು ಇಂತಹ ದೃಶ್ಯಗಳನ್ನು ಬಿತ್ತರಿಸುವುದರ ಮೂಲಕ ಅಂಬೇಡ್ಕರ್ ಇತಿಹಾಸಕ್ಕೆ ಅವಹೇಳನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಪ್ಪು ಮಾಹಿತಿ ನೀಡುತ್ತಿರುವ ದಾರಾವಾಹಿಯ ನಿರ್ದೇಶಕ, ನಿರ್ಮಾಪಕ ಮತ್ತು ಸಂಪೂರ್ಣ ತಂಡದ ಮೇಲೆ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿಯ ಮೂಲಕ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾ ಬಕ್ಕೋಳಿ, ಗೋಪಿ, ಬಳ್ಳಾರಿ, ಫಕೀರಪ್ಪಾ ತಳವಾರ, ನಝೀರಾ ಉಸ್ತಾದ, ರವಿ ಕಾಂಬ್ಳೆ, ವಿಲ್ಸನ್ ಮಾರಿಹಾಳ, ಸಚೀನ್ ಕೋಲಕಾರ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Leave a Reply