Belagavi

ಬೈಲಹೊಂಗಲ. ೭ ರಿಂದ ದುರ್ಗಾ ಮಾತಾ ದೌಡ್ ಪ್ರಾರಂಭ


ಬೈಲಹೊಂಗಲ ೫ – ಇಲ್ಲಿಯ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಇವರ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ದುರ್ಗಾ ಮಾತಾ ದೌಡ್ ಕಾರ್ಯಕ್ರಮ ದಿನಾಂಕ ೭ ರಿಂದ ೧೫ರ ವರೆಗೆ ಜರಗಲಿದೆ.
ಪಟ್ಟಣದ ಜವಳಿ ಕೂ ಟದಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ೬:೦೦ ಗಂಟೆಗೆ ದುರ್ಗಾಮಾತಾ ದೌಡ್ ಕಾರ್ಯಕ್ರಮವನ್ನು ಮೂರುಸಾವಿರಮಠದ ಪ್ರಭು £Ãಲಕಂಠ ಮಹಾಸ್ವಾಮಿಗಳವರು ಉದ್ಘಾಟಿಸುವರು
ಗುರುವಾರ ದಿನಾಂಕ ೭ ರಂದು ಆರಂಭವಾಗುವ ದೌಡ್ ಗ್ರಾಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಅಂಬೇಡ್ಕರ ನಗರದಲ್ಲಿರುವ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳುವುದು. ಗುರುವಾರ ದಿ ೭ ರಿಂದ ಆರಂಭವಾಗುವ ದುರ್ಗಾಮಾತಾ ಪ್ರತಿದಿನ ಬೆಳಿಗ್ಗೆ ೬ ಗಂಟೆಗೆ ಪ್ರಾರಂಭವಾಗಿ ಶುಕ್ರವಾರ ದಿ. ೧೫ ರವರೆಗೆ ಪಟ್ಟಣದ ಎಲ್ಲ ಭಾಗಗಳಲ್ಲಿ ಸಂಚರಿಸುವುದು ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ ತಳಿರು ತೋರಣಗಳಿಂದ ಸಿಂಗರಿಸಿ ತಮ್ಮ ಮನೆಯ ಬಾಗಿಲ ಬಳಿ £ಂತು ಆರತಿ ಮಾಡಬೇಕೆಂದು ವಿ, ಎಚ್, ಪಿ ಹಾಗೂ ಬಜರಂಗದಳ ಪ್ರಕಟನೆಯಲ್ಲಿ ತಿಳಿಸಿದೆ.

 


Leave a Reply