Belagavi

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಪ್ರತಿಕೃತಿ ದಹನ : ಭಾವಚಿತ್ರಕ್ಕೆ ಚಪ್ಪಲಿ ಸೇವೆ ಬೈಲಹೊಂಗಲ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಕ್ರೋಶ


ಬೈಲಹೊಂಗಲ: ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಅವರ ಕುರಿತು ಲಘುವಾಗಿ ಹೇಳಿಕೆ ನೀಡಿರುವ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಅವರ ಪ್ರತಿಕೃತಿ ದಹನ ಮಾಡಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಸ್ತಿçà ಕುಲಕ್ಕೆ ಕಳಂಕ ತರುವ ರೀತಿಯಲ್ಲಿ ಅಸಂಭದ್ದ ಹೇಳಿಕೆ ನೀಡಿರುವ ಸಂಜಯ ಪಾಟೀಲ ಅವರು ಕೂಡಲೇ ಲಕ್ಷಿö್ಮà ಹೆಬ್ಬಾಳಕರ ಅವರಿಗೆ ಕ್ಷಮೆಯಾಚಿಸಬೇಕು. ಪದೇ, ಪದೇ ದ್ವೇಷದ ರಾಜಕಾರಣ ಮಾಡುತ್ತಿರುವುದನ್ನು ತಕ್ಷಣ ಬಿಟ್ಟು ಬಿಡಬೇಕು ಎಂದು ಒತ್ತಾಯಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ನಾಯಕ ಸಂಜಯ ಪಾಟೀಲ ಅವರು ನಮ್ಮ ಪಕ್ಷದ ಶಾಸಕಿ ಲಕ್ಷಿö್ಮà ಹೆಬ್ಬಾಳಕರ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಇದು ಸ್ತಿçÃಯರಿಗೆ ಮಾಡಿರುವ ಅಪರಾಧವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಅವರ ಜನಪ್ರೀಯತೆ, ಜನಪರ ಕಾರ್ಯ ಸಹಿಸಿಕೊಳ್ಳದೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಬಿಜೆಪಿ ಪಕ್ಷ, ಸಂಜಯ ಪಾಟೀಲ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಕೂಡಲೇ ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಕ್ಷಮೆಯಾಚಿಸಿ ಮತ್ತೊಮ್ಮೆ ತಪ್ಪಾಗದೆ ನಡೆದುಕೊಳ್ಳಬೇಕು’ ಎಂದರು.
ತಾಲೂಕಾಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ, ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸದಸ್ಯರಾದ ರಾಜಶೇಖರ ಮೂಗಿ, ರಾಜು ಜನ್ಮಟ್ಟಿ, ವಿಜಯ ಬೋಳಣ್ಣವರ, ಉಳವಪ್ಪ ಬಡ್ಡಿಮನಿ, ಕೆ.ಐ.ಮುಲ್ಲಾ, ಮುಖಂಡರಾದ ಬಸವರಾಜ ಕೌಜಲಗಿ, ನಿಸ್ಸಾರಅಹ್ಮದ ತಿಗಡಿ, ಈರಣ್ಣಾ ಬೆಟಗೇರಿ, ವಿರುಪಾಕ್ಷ ವಾಲಿ, ಚಂದು ಹೊಸೂರ, ಆನಂದ ವಾಲಿ, ಹಸನ್ ಗೊರವನಕೊಳ್ಳ, ಮಾರುತಿ ಶರೆಗಾರ, ಪ್ರಕಾಶ ಬಳಗಾರ, ಅಶೋಕ ಹುದ್ದಾರ, ಮಲ್ಲಪ್ಪ ಗರ್ಜೂರ, ಕಾರ್ತಿಕ ಪಾಟೀಲ, ಈರಪ್ಪ ಹತ್ತಿಕಟಗಿ, ಪ್ರವೀಣ ಬೋಡಕಿ, ಸಂತೋಷ ಮಂಗಳಗಟ್ಟಿ, ರಮೇಶ ಪರಂಡಿ, ಈರಣ್ಣಾ ಸಂಪಗಾAವ, ಸಮದ ತೋಲಗಿ, ಎಸ್.ಕೆ.ಮೆಳ್ಳಿಕೇರಿ, ನೂರ ಸಂಗ್ರೇಶಕೊಪ್ಪ, ಗಂಗಾಧರ ಮೂಗಬಸವ, ಮಂಜು ಮೊರಬದ, ಶಂಕರ ಹೀರುನವರ, ಮಹಾಂತೇಶ ವಿವೇಕಿ, ವಿಷ್ಣು ಕಾರಬಾರಿ, ಅರುಣ ಯಲಿಗಾರ, ಅನಿಲ ಮ್ಯಾಕಲಮರ್ಡಿ, ಮಡಿವಾಳ ಮರಕುಂಬಿ, ಪ್ರಶಾಂತ ಪಟ್ಟಣಶೆಟ್ಟಿ, ಬೆಳವಡಿ, ಉಡಿಕೇರಿ, ಮೂಗಬಸವ, ಬುಡರಕಟ್ಟಿ, ದೊಡವಾಡ, ಇಂಗಳಗಿ, ಗೋವನಕೊಪ್ಪ, ಬೈಲವಾಡ, ಆನಿಗೋಳ, ಮುರಗೋಡ, ಮರಕುಂಬಿ, ಹೊಸೂರ, ಸಂಗೊಳ್ಳಿ, ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.


Leave a Reply