Belagavi

ಶಾಲೆಗೆ ಹೋಗು ಎಂದಿದ್ದಕ್ಕೆ ನೇಣಿಗೆ ಶರಣಾದ ಬಾಲಕ


ಪಾಲಕರು ಶಾಲೆಗೆ ಹೋಗು ಎಂದು ಹೇಳಿದ್ದ ಕ್ಷುಲ್ಲಕ ಕಾರಣಕ್ಕೆ ಮನನೊಂದ 13 ವರ್ಷದ ವಿದ್ಯಾರ್ಥಿಯೊಬ್ಬ ನೇಣು ಬಿಗಿದಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಮೃತ ಬಾಲಕ ನಗರದ ಕಸಾಯಿ ಗಲ್ಲಿಯ ಶಾಹೀದ್ ಶೇಖ್(13) ಎಂದು ಗುರುತಿಸಲಾಗಿದೆ. ಖಾಲೇಖಾನ್ಗೆಮ ಮೂರು ಮಕ್ಕಳಿದ್ದು. ಮೃತ ಬಾಲಕ ಮೊದಲ ಮಗನಾಗಿದ್ದಾನೆ. ನಗರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ಎಲ್ಲಾ ಕಡೆ ಶಾಲೆ ಆರಂಭವಾಗಿರುವ ಹಿನ್ನೆಲೆ ಶೇಖ್ ಗೆ ಶಾಲೆಗೆ ಹೋಗುವಂತೆ ಪಾಲಕರು ಹೇಳಿದ್ದಾರೆ.

ಇದನ್ನೇ ಕಾರಣವಾಗಿಟ್ಟುಕೊಂಡ ಬಾಲಕ ತಂದೆ ತಾಯಿ ಹೊರಗೆ ಹೋದ ಸಂದರ್ಭದಲ್ಲಿ ನೇಣಿಗೆ ಶರನಾಗಿದ್ದಾನೆ.
ಘಟನಾ ಸ್ಥಳಕ್ಕೆ ಮಾರ್ಕೆಟ್ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಊಡ ವಿಠಲ ಹವನೂರ ಆಗಮಿಸಿ ಪರಿಶೀಲನೆ ನಡೆಸಿದರು. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply