Koppal

ಸಾವಿನ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ- ಮಾಜಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಹೇಳಿಕೆ


ಕುಷ್ಟಗಿ ಶಾಸಕರು ನಿನ್ನೆ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಮಾತನಾಡಿ ಉತ್ತರಪ್ರದೇಶದ ಗಲಭೆಯನ್ನು ಖಂಡಿಸುವ ಸಂದರ್ಭದಲ್ಲಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಅಸಂಬದ್ಧ ಮತ್ತು ಅಸಮಂಜಸ ಹೇಳಿಕೆಯನ್ನು ಕೊಟ್ಟಿದ್ದಾರೆ, ಯಾರೇ ಆಗಲಿ ಸಾವಿನ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಮತ್ತು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಂದ ಹಿಡಿದು ಕಾಂಗ್ರೆಸ್ ನ ಬಹುತೇಕ ಮುಖಂಡರುಗಳಲ್ಲಿ ಹತಾಶ ಭಾವನೆ ಮುಡಿದ್ದು ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಕುಷ್ಟಗಿ ಮಾಜಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರು ಹೇಳಿದರು.

ಅವರು ಇಂದು ಕುಷ್ಟಗಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂಬ ಹಂಬಲ ಕಾಂಗ್ರೆಸ್ಸಿನವರದು ಆದ್ದರಿಂದಲೇ ಬಾಯಿಗೆ ಬಂದಂತೆ ಮಾತನಾಡುವ ಚಟ ಅವರಿಗೆ ಹತ್ತಿದೆ,

ಆದರೆ ಇದರ ಮಧ್ಯೆ ಬಿಜೆಪಿಯವರು ಸತ್ತರೆ ಕೋಟಿ ಕೊಡುತ್ತೇನೆ ಎನ್ನುತ್ತಾರೆ ಎಂದರೆ ಇವರ ಬಳಿ ಎಷ್ಟು ಹಣ ಆದರೂ ಇದೆ ಎಂದು ಬಹಳ ಖಾರವಾಗಿ ಪ್ರಶ್ನಿಸಿದರು, ಬರೀ ಚಪಲದ ಮಾತುಗಳನ್ನು ಆಡುವುದನ್ನು ಬಿಡಬೇಕು , ಬರಿ ರಾಜಕಾರಣ ಮಾಡುವುದಕ್ಕಾಗಿಯೇ ಏನಾದರೂ ಹೇಳಿಕೆ ಕೊಡುವುದು ಸಮಂಜಸವಲ್ಲ, ಬಿಜೆಪಿಯ ಮುಖಂಡರು ಯಾರಾದರೂ ಸತ್ತರೆ 1ಕೋಟಿ ಕೊಡುತ್ತೇನೆ ಎನ್ನುವ ಇವರು ಯಾರಾದರೂ ಬಿಜೆಪಿ ಮುಖಂಡರು ಸಾಯಲಿ ಎನ್ನುವುದು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಇಚ್ಛೆ ಆಗಿದೆಯಾ ಎಂದು ಪ್ರಶ್ನಿಸಿದರು, ಏನಾದರೂ ಆಗಲಿ ತಮ್ಮ ರಾಜಕಾರಣ ನಡೆದರೆ ಸಾಕು ಎನ್ನುವುದು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಅನಿಸಿಕೆ ಇರಬೇಕು, ಮತ್ತು ಪದೇಪದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬಯ್ಯುವುದು ಮತ್ತು ಬಿಜೆಪಿ ನಾಯಕರುಗಳನ್ನು ಬಯ್ಯುವುದು, ಇದರಿಂದ ನೀವು ದೊಡ್ಡವರಾಗುವುದಿಲ್ಲ ನೀವು ಕೀಳುಮಟ್ಟಕ್ಕೆ ಹೋಗುತ್ತಿರಿ ಎಂದರು, ತಾವೊಬ್ಬ ಹಿರಿಯ ರಾಜಕಾರಣಿ ಆಗಿ ತಮ್ಮ ಗೌರವಕ್ಕೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು ಮತ್ತು ಕೆಳಮಟ್ಟದ ರಾಜಕಾರಣ ಮಾಡುವುದನ್ನು ಬಿಡಬೇಕು, ಜೊತೆಗೆ ಸಣ್ಣಮಟ್ಟದ ಶಬ್ದಗಳು ಬಳಸುವುದನ್ನು ಕೂಡ ಬಿಡಬೇಕು ಇದೇ ರೀತಿ ಮುಂದುವರಿದರೆ ಕ್ಷೇತ್ರದ ಜನತೆ ಎಲ್ಲವನ್ನೂ ನೋಡುತ್ತಿರುತ್ತಾರೆ ಮುಂದಿನ ದಿನಮಾನಗಳಲ್ಲಿ ಇದಕ್ಕೆ ತಕ್ಕ ಉತ್ತರ ಅವರೆ ನೀಡುತ್ತಾರೆ ಎಂದರು, ತಮ್ಮ ಅವಧಿಯ ಅಭಿವೃದ್ಧಿ ಕೆಲಸಗಳನ್ನು ಮರೆಮಾಚಲು ಈ ರೀತಿಯ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಇಂಥ ಹೇಳಿಕೆಗಳು ಪುನರಾವರ್ತನೆಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು, ಪುರಸಭೆ ಅಧ್ಯಕ್ಷರಾದ ಜಿ. ಕೆ. ಹಿರೇಮಠ , ತಾಲೂಕ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡಿಗೇರಿ ,ಬಿಜೆಪಿ ಮುಖಂಡರುಗಳಾದ ಶಶಿಧರ್ ಕವಲಿ, ವಿಜಯಕುಮಾರ್ ಹಿರೇಮಠ್, ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ರವಿಕುಮಾರ್ ವಣಗೇರಿ, ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷರಾದ ಹನುಮಗೌಡ, ಮಾರುತಿ ಹಲಗಿ ಸೇರಿದಂತೆ ಹಲವರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply