Belagavi

ಜಿಟಿಟಸಿ ಟೊಯೊಟಾ ಆಟೋಮೋಬೈಲ್ ತರಬೇತಿ


ಬೆಳಗಾವಿ: ಅರಬಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಹಾಗೂ ಟೊಯೊಟಾಕಿರ್ಲೋಸ್ಕರ್ ಮೋಟಾರ್ಸ ಕಂಪನಿಗಳ ಸಹಬಾಗಿತ್ಬದಲ್ಲಿ ಹೊಸದಾಗಿ ಪ್ರಾರಂಭವಗಿರುವ ಆಟೊಮೋಬೈಲ್ ವೆಲ್ಡರ್ ಮತ್ತು ವೆಹಿಕಲ್ ಅಸ್ಸೆಂಬ್ಲಿ ಪಿಟ್ಟರ್ ಕೋರ್ಸಗಳಿಗೆ ಪ್ರವೇಶ ಪ್ರಾರಂಭವಗಿದೆ.
ಮೊದಲ ವರ್ಷ ಅರಭಾವಿಯ ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು.

2 ಮತ್ತು 3ನೇಯ ವರ್ಷ ಬೆಂಗಳೂರಿನ ಟೊಯೊಟಾ ಕಾರು ಉತ್ಪಾದನ ಕಂಪನಿಯಲ್ಲಿ ಮಾಸಿಕ ಶೀಷ್ಯವೇತನ ಸಹಿತ ಕೈಗಾರಿಕಾ ತರಬೇತಿ ನೀಡಲಾಗುವುದು. ೦3 ವರ್ಷದ ತರಬೇತಿ ಪೂರ್ಣಗೊಳಿಸುವವರಿಗೆ ಟೊಯೊಟಾ ಸಮೂಹದಲ್ಲಿ ಉದ್ಯೋಗ ದೊರಕಲಿದೆ. ವಿದ್ಯಾರ್ಥೀಗಳಿಗೆ ಟೊಯೊಟಾ ಕಂಪನಿಯಿಂದಲೇ ನಿಯೋಜಿತರಾದ ತಂತ್ರಜ್ಞರಿಂದ ವಿಶ್ವದರ್ಜೆಯ ತರಬೇತಿ ನೀಡುವುದು ವಿಶೇಷ. ಆಟೊಮೋಬೈಲ್ ವೆಲ್ಡರ್ ಮತ್ತು ವೆಹಿಕಲ್ ಅಸ್ಸೆಂಬ್ಲಿ ಪಿಟ್ಟರ್ ಟ್ರೇಡಗಳಲ್ಲಿ ತರಬೇತಿ ಪಡೆದ ಯುವಕರಿಗೆ ಕಾರ್ ಮತ್ತು ಎಲ್ಲ ತರಹದ ವಾಹನ ಉತ್ಪಾದಿಸುವ ಕಂಪನಿಗಳಲ್ಲಿ ಬಾರಿ ಬೇಡಿಕೆ ಇದೆ. 10 ನೇಯ ತರಗತಿ ಉತ್ತಿರ್ಣರಾದ 16 ರಿಂದ 19 ವಯೋಮಿತಿಯವರು ತರಬೇತಿ ಪಡೆಯಬಹುದಾಗಿದೆ. ಆಸಕ್ತರು ಶೈಕ್ಷಣಿಕ ಹಾಗೂ ವಿಳಾಸ ದೃಡಿಕರಣ ದಾಖಲೆಗಳೊಂದೆಗೆ ಜಿಟಿಟಿಸಿ, ನಾಡ ಕಛೇರಿ ಹತ್ತೀರ ಅರಭಾವಿ ತಾ: ಮೂಡಲಗಿ ಜಿ: ಬೆಳಗಾವಿ ಇಲ್ಲಿಗೆ ಬೇಟಿ ನೀಡಿ. ಅಕ್ಟೋಬರ್ 15 ರೊಳಗೆ ಪ್ರವೇಶ ಪಡೆಯಬಹುದು. ಹೆಚ್ಚೀನ ಮಾಹಿತಿಗೆ ಮೊ. ಸಂ. 9538570950 ಮತ್ತು 990019164 ಸಂಪರ್ಕಿಸಲು ಕೋರಲಾಗಿದೆ.


Leave a Reply