Uncategorized

ಲಿಂಗಸಗೂರು ತಾಲೂಕು ಸಂಪೂರ್ಣ ನೀರಾವರಿ ಮಾಡಬೇಕೆಂದು. ಆರ್ ಮಾನಸಯ್ಯನವರ ನೇತೃತ್ವದಲ್ಲಿ ಹೋರಾಟದ ಬಗ್ಗೆ ಪೂರ್ವಬಾವಿ ಸಭೆ- ಲಿಂಗಸಗೂರು


ಲಿಂಗಸಗೂರು: ತಾಲೂಕಿನಾದ್ಯಂತ ರೈತರಿಗೆ ನೀರಾವರಿ ಯೋಜನೆ ಸಂಪೂರ್ಣ ಆಗದ ಕಾರಣ ರೈತರಿಗೆ ವಂಚನೆ ಆಗಿದೆ ಆದ ಕಾರಣ ಎಲ್ಲ ಸಮುದಾಯದ ಬಂಧುಗಳು ಬಾಗವಹಿಸಿ ಹೋರಾಟ ಮಾಡಬೇಕಾಗಿದೆ ಹೋರಾಟದ ಮೂಲಕ ರೈತಾಪಿ ಜನರಿಗೆ ನ್ಯಾಯವಾದಗಿಸಬೇಕಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ರೈತರು ಮತ್ತು ಎಲ್ಲ ಸಮುದಾಯದ ಜನರು ಹೋರಾಟದಲ್ಲಿ ಬಾಗವಹಿಸಿ ಹೋರಾಟಕ್ಕೆ ಬೆಂಬಲಿಸಬೇಕಾಗಿದೆ ಎಂದು ಸಭೆಯಲ್ಲಿ ಆರ್ ಮಾನಸಯ್ಯ ಹೇಳಿದರು. ಸಭೆಯಲ್ಲಿ ರೈತ ಸಂಘದ ಮುಖ್ಯಸ್ಥರಾದ ಅಮರಣ್ಣ ಗುಡಿಹಾಳ ಅವರು ಮಾತನಾಡಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆಂದು ಹೇಳಿದರು. ಮತ್ತು ಅನೇಕ ಸಮಾಜದ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ಬಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆಂದು ಈ ಸಂದರ್ಭದಲ್ಲಿ ಹೇಳಿದರು. ಎಲ್ಲ ಮಾಹಿತಿಯನ್ನು ಸಂಗ್ರಹಿಸಿದ ಮಾನಸಯ್ಯ ದೊಡ್ಡಮಟ್ಟದಲ್ಲಿ ಕೆಲ ಕಂಪನಿಗಳು ಲೂಟಿ ಮಾಡುತ್ತಿದ್ದಾರೆ ಎಂದರು ಈ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಎಂದು ಎಲ್ಲಾ ಸಮುದಾಯದ ಜನಕ್ಕೆ ಮನವಿ ಮಾಡಿದರು.

ವರದಿ ವೀರಭದ್ರಯ್ಯ.ಬಿ.ಹಿರೇಮಠ.
ಲಿಂಗಸಗೂರು.


Leave a Reply