Belagavi

ಸರಕಾರಿ ಕಚೇರಿಗಳ ಮೇಲೆ ನಾಡಧ್ವಜ ಹಾರಿಸಲು ಆಗ್ರಹ


ಬೆಳಗಾವಿ: ರಾಜ್ಯದ ಎಲ್ಲಾ ಸರಕಾರಿ ಮತ್ತು ಅರೇ ಸರಕಾರಿ ಕಚೇರಿಯ ಕಟ್ಟಡಗಳ ಮೇಲೆ ಕನ್ನಡ ನಾಡಧ್ವಜ ಹಾರಿಸಲು ಸರಕಾರ ಆದೇಶ ಹೊರಡಿಸಬೇಲು ಇಲ್ಲದಿದ್ದರೆ ಅ.26 ರಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮಾದ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಷ್ಟ್ರ ಧ್ವಜಕ್ಕೆ ಚ್ಯುತಿ ಬರದ ರೀತಿಯಲ್ಲಿ ಕನ್ನಡ ನಾಡಧ್ವಜವನ್ನು ಹಾರಿಸಲು ಮತ್ತು ಆಯ್ದ ಯಾವುದೇ ಧ್ವಜಕ್ಕೆ ಕರ್ನಾಟಕ ರಾಜ್ಯದ ಧ್ವಜವೆಂದು ಕಾನೂನು ಸ್ವರೂಪ ನೀಡಲು ಕಾನೂನಿನಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲವೆಂದು ಅಡ್ವೋಕೇಟ್ ಜನರಲ್ ಕಳೆದ 8 ಅಕ್ಟೋಬರ್ 2015ರಂದು ಸರಕಾರಕ್ಕೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ ಇದನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಎಲ್ಲ ಸರಕಾರಿ ಮತ್ತು ಅರೇ ಸರಕಾರಿ ಕಚೇರಿಯ ಕಟ್ಟಡದ ಮೇಲೆ ಈಗ ಹಾರಿಸಲಾಗುತ್ತಿರುವ ನಮ್ಮ ರಾಷ್ಟ್ರ ಧ್ವಜಕ್ಕೆ ಚ್ಯುತಿ ಬರದ ರೀತಿಯಲ್ಲಿ ನಮ್ಮ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾದ ಕನ್ನಡ ನಾಡಧ್ವಜವನ್ನು ಹಾರಿಸುವುದು ಅವಶ್ಯವಿದೆ. ಈ ಕುರಿತು ಕಳೆದ 24 ನವೆಂಬರ್ 2014ರಿಂದ ಸರಕಾರಕ್ಕೆ ಸಾಕಷ್ಟು ಪತ್ರ ಬರದು ಹೋರಾಟಗಳನ್ನು ನಡೆಸುತ್ತಿದ್ದರೂ ಸರಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಕಷ್ಟು ಪತ್ರ ವ್ಯವಹಾರ ಹೋರಾಟಗಳ ನಂತರ ಕೊನೆಗೂ ಎಚ್ಚೆತ್ತುಕೊಂಡ ಸರಕಾರ ಈಗಿರುವ ನಾಡಧ್ವಜಕ್ಕೆ ಹೊಸ ವಿನ್ಯಾಸವನ್ನು ಸಿದ್ಧಪಡಿಸಿ ಅದಕ್ಕೆ ಕಾನೂನು ಸ್ವರೂಪ ನೀಡುವ ನಿಟ್ಟಿನ್ಲಿ 2017ರಂದು 9 ಜನ ಸರಕಾರಿ ಅಧಿಕಾರಿ ಹಾಗೂ ಸರಕಾರಿಯೇತರ ಸದಸ್ಯರುಗಳು ಸಮಿತಿ ರಚಿಸಿ ಸರಕಾರ ಆದೇಶ ಹೊರಡಿಸಿತ್ತು.

ಸಾಕಷ್ಟು ವಿಳಂಬದ ನಂತರ ಈ ಸಮಿತಿಯೂ ಹಲವಾರು ಬಾರಿ ಸಭೆ ಸೇರಿ ನಾಡಿನ ಹಿರಿಯ ಸಾಹಿತಿಗಳು, ಕನ್ನಡಪರ ಚಿಂತಕರು ಮತ್ತು ರಾಜ್ಯದ ಪ್ರಮುಖ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಈಗಿರುವ ನಾಡಧ್ವಜಕ್ಕೆ ಅಂತಿಮ ವಿನ್ಯಾಸ ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಸಾಕಷ್ಟು ಪರ, ವಿರೋಧಗಳ ನಡುವೆ ಈ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಹೇಳಿದ್ದಾರೆ.


Leave a Reply