Belagavi

ಮುಸ್ಲಿಂ ಯುವಕ ಹತ್ಯೆಗೈದ ರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹ


ಬೆಳಗಾವಿ: ಕೋಮುವಾದದ ಹೆಸರಲ್ಲಿ ಖಾನಾಪುರ ತಾಲೂಕಿನ ಅರಬಾಜ್ ಮುಲ್ಲಾ ಎಂಬ ಮುಸ್ಲಿಂ ಯುವಕನನ್ನು ದೈಹಿಕ ಹಿಂಸೆ ಕೊಟ್ಟು ರೈಲ್ವೆ ಹಳಿ ಮೇಲೆ‌ ಕೊಲೆ ಮಾಡಿರುವ ಬಂಧಿತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸೈಯದ ಮನ್ಸೂರ ಒತ್ತಾಯಿಸಿದರು.

ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಅರಬಾಜ್ ಮುಲ್ಲಾ ಎಂಬ ಮುಸ್ಲಿಂ ಯುವಕನ ಕೈ ಕಟ್ಟಿ ಕೊಲೆಮಾಡಲಾಗಿದೆ. ಹಿಂದೂತ್ವದ ಅಜೆಂಡಾ ಹೆಸರಿದನಲ್ಲಿ ಮುಸ್ಲಿಂ ಯುವಕನ ಕೊಲೆ ಮಾಡಿರುವ ಶ್ರೀರಾಮ್ ಸೇನಾ ಹಿಂದೂಸ್ತಾನ್ ಸಂಘಟನೆಯ ಖಾನಾಪುರ ತಾಲೂಕಾ ಅಧ್ಯಕ್ಷ ಸೇರಿದಂತೆ ಬಂಧಿತ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಲವ್ ಜೀಹಾದ ಎಂದು ಕೂಗಾಡುವ ಇವರು, ಒಬ್ಬ ಮುಸ್ಲಿಂದ ಯುವಕನ ಸ್ನೇಹ ಬೆಳೆಸಿದ ಯುವತಿಗೆ ಬುದ್ಧಿವಾದ ಹೇಳಬೇಕಿತ್ತು. ಅದನ್ನು ಬಿಟ್ಟು ಯುತಿಯ ಮನೆಯವರು ಹಾಗೂ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ತಾಲೂಕಾಧ್ಯಕ್ಷ ಸೇರಿಕೊಂಡು ಕೊಲೆ ಮಾಡಿದ್ದಲ್ಲದೆ, ಕೈ ಕಟ್ಟಿ ರೈಲ್ವೆ ಹಳಿಗೆ ಎಸೆದು ಕುಕೃತ್ಯ ಮೆರೆದಿದ್ದು ಖಂಡನೀಯ. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಮೃತ ಯವಕನ ಕುಟುಂಬದ ದುಃಖದಲ್ಲಿ ನಮ್ಮ ಮುಸ್ಲಿಂ ಸಮುದಾಯ ನಿಲ್ಲುತ್ತದೆ. ಯುವತಿಯ ಕುಟುಂಬದವರಿಗೆ ಕೊಲೆ ಮಾಡಲು ಪ್ರೇರೆಪಿಸಿದ ಹಿಂದೆ ಒಂದು ಸಂಘಟನೆಯಿದ್ದು, ಅದು ಯಾವುದು ಎಂಬುದು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಅದರ ಮೇಲೂ ಕ್ರಮ ಕೈಗೊಳ್ಳಬೇಕೆಂದರು ಒತ್ತಾಯಿಸಿದರು.


Leave a Reply