Belagavi

ನೂತನ  ಅಂಗನವಾಡಿ ಕಟ್ಟಡ ಉದ್ಘಾಟನೆ ಮಕ್ಕಳಿಗೆ  ಉತ್ತಮ ಸಂಸ್ಕಾರ  ನೀಡಬೇಕು ಶಾಸಕ  ಕೌಜಲಗಿ


ಬೈಲಹೊಂಗಲ  8 – ದೇಶದ ಆಸ್ತಿ ಗಳಾಗಿರುವ ಮುದ್ದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ದೇಶಪ್ರೇಮಿ ಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಮತ್ತು ಪಾಲಕರು  ಮಹತ್ವದ ಕಾರ್ಯವನ್ನು ಮಾಡಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಕರೆ ನೀಡಿದರು.

ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ಸುಮಾರು 17 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದಿಂದ ಬಂದಿರುವ ಎಲ್ಲ ರೀತಿಯ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ಬಾಣಂತಿಯರಿಗೆ ಗರ್ಭಿಣಿಯರಿಗೆ ತಲುಪಿಸಿ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತರು ಮಾಡಬೇಕೆಂದು ನನುಡಿದರು.

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರೇವತಿ ಹೊಸಮಠ ಮಾತನಾಡಿ ಸಿದ್ಧಸಮುದ್ರ ಗ್ರಾಮದಲ್ಲಿ ಮಕ್ಕಳ ಮತ್ತು ಬಾಣಂತಿಯರ ಹಾಗೂ ಗರ್ಭಿಣಿಯರ ಸಂಖ್ಯೆ ಹೆಚ್ಚಿದ್ದು ಸರ್ಕಾರದ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಮಾತೃವಂದನಾ ಯೋಜನೆಗಳ ಸದುಪಯೋಗ ಪಡೆದು ಪಡೆದುಕೊಳ್ಳುತ್ತಿದ್ದು ಇನ್ನು ಮುಂದೆಯು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದು ಆರೋಗ್ಯವಂತರಾಗಿ ಬೇಕೆಂದು ನುಡಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯವನ್ನು ಮಾಡಲಾಯಿತು ಅಲ್ಲದೆ ಭಾಗ್ಯಲಕ್ಷ್ಮಿ ಬ್ಯಾಂಕ ಪುಸ್ತಕ ವಿತರಿಸಲಾಯಿತು. ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ನೀಡಿದ ಸಂಗಪ್ಪ ತಟ್ಟಿಮನಿ  ಅವರನ್ನು ಸನ್ಮಾನಿಸಲಾಯಿತು

ಜಿ,  ಪಂ ಸದಸ್ಯ ಈರಣ್ಣ ಕರಿಕಟ್ಟಿ ತಾ,  ಪಂ,  ಸದಸ್ಯ ಕಕ್ಕಯ್ಯನವರ ಗ್ರಾಮ ಪಂಚಾಯತ ಉಪಾಧ್ಯಕ್ಷ ನಂದಿಹಳ್ಳಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಎಂದರು ಮುಖ್ಯ ಶಿಕ್ಷಕರು ಬೆಳಗಾವಿ ನಿರೂಪಿಸಿದರು


Leave a Reply