Belagavi

ದಿವಂಗತ ಕಲ್ಯಾಣರಾವ್ ಮುಚಳಂಬಿವರಿಗೆ ಪತ್ರಕರ್ತ ಬಳಗದಿಂದ ಶ್ರದ್ಧಾಂಜಲಿ ಸಭೆ “ಕಲ್ಯಾಣ’’ ನಾಡಿನಿಂದ ಬಂದು ಬೆಳಗಾವಿಯಲ್ಲಿ “ಕ್ರಾಂತಿ’’ ಮಾಡಿದ ಮುಚಳಂಬಿ: ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಅಭಿಮತ


ಬೆಳಗಾವಿ: “ಕಲ್ಯಾಣ’’ ನಾಡಿನಿಂದ ಬಂದು ಬೆಳಗಾವಿಯಲ್ಲಿ “ಕ್ರಾಂತಿ’’ ಮಾಡಿ ಸಕಲ ಕ್ಷೇತ್ರಗಳಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡ ದಿವಂಗತ ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ಅವರು ಮಾಡಿದ ಸಾಧನೆ ಅಪರೂಪವಾಗಿದೆ ಎಂದು ಜಿಲ್ಲಾ ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಅಭಿಪ್ರಾಯಪಟ್ಟರು.

ಇಂದು ನಗರದ ವಾರ್ತಾ ಇಲಾಖೆಯ ಸಭಾಭವನದಲ್ಲಿ ವಾರ್ತಾ ಇಲಾಖೆ ಹಾಗೂ ಜಿಲ್ಲಾ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ಮೊನ್ನೆ ತಾನೆ ನಿಧನರಾಗಿರುವ ಜಿಲ್ಲೆಯ ಹಿರಿಯ ಪತ್ರಕರ್ತ “ಹಸಿರುಕ್ರಾಂತಿ’’ ಕನ್ನಡ ದಿನ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಮುಚಳಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕ್ಷೇತ್ರ ಅವಲೋಕಿಸಿದರೂ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಗೆ ಒಂದು ವಿಶೇಷ ಸ್ಥಾನಮಾನವಿದೆ. ಬೆಳಗಾವಿ ಜಿಲ್ಲೆ ರಾಜ್ಯ, ರಾಷ್ಟç ಮಟ್ಟದಲ್ಲಿ ಬೆಳೆಯಲು ಈ ಮಣ್ಣಿನ ಸಾವಿರಾರು ಮಹನೀಯರ ಕೊಡುಗೆ ಅಪಾರವಾಗಿದೆ. ಜಿಲ್ಲೆಯ ಪತ್ರಕರ್ತರು ಅನುಭವಗಳನ್ನು ಕೂಡಿಸಿಯೇ ಕಲ್ಯಾಣರಾವ್ ಮುಚಂAಬಿ ಅವರ ಕುರಿತು ಪುಸ್ತಕ ಬರೆಯುವ ಹಂಬಲವಾಗುತ್ತಿದೆ ಎಂದು ಆಶಯ ವ್ಯಕ್ತಪಡೆಸಿದರು.

ಗಡಿಕನ್ನಡಿಗ ದಿನ ಪತ್ರಿಕೆಯ ಸಂಪಾದಕ ಮುರಗೇಶ ಶಿವಪೂಜಿ ಮಾತನಾಡಿ, ಕಲ್ಯಾಣರಾವ್ ಮುಚಳಂಬಿ ಅವರು ಬದುಕಿನುದ್ದಕ್ಕೂ ಹೋರಾಟ ಮಾಡುತ್ತಲೇ ಬಂದರು. ತಾನೊಬ್ಬರೇ ಬದುಕಿಕೊಳ್ಳಲು ಇನ್ನೊಬ್ಬರನ್ನು ಉಬ್ಬಿಸಿ ಖುಷಿ ಪಡಿಸುವ ಗೋಜಿಗೆ ಹೋಗಲಿಲ್ಲ. ಯಾರ ಪರವಾಗಿಯೂ ಮಾತನಾಡಲಿಲ್ಲ. ಯಾರ ಜೊತೆಗೂ ಹಜ್ಜೆ ಹಾಕಲಿಲ್ಲ. ತಾವು ನಡೆದದ್ದೇ ದಾರಿ ಎಂದು ಬದುಕಿ ಅವರ ಮಕ್ಕಳಿಗೂ ಬದುಕನ್ನು ರೂಪಿಸಿ ಕೊಟ್ಟರು. ಪತ್ರಿಕಾ ರಂಗದ ಜೊತೆ ಜೊತೆಗೆ, ಧಾರ್ಮಿಕ, ಸಾಮಾಜಿಕ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಸ್ವತಃ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡುತ್ತ ನಾಡಿನಾದ್ಯಂತ ಒಂದಿಲ್ಲೊAದು ರೀತಿಯ ಸಾಧನೆ ಮಾಡುತ್ತ ಪ್ರತಿಭೆಗಳ ಅವÀರವರ ಬದುಕಿಗೊಂದು ರೂಪ ಕೊಟ್ಟ ಕೀರ್ತಿ ಕಲ್ಯಾಣರಾವ್ ಮುಚಳಂಬಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ ಮುರಗೇಶ ಶಿವಪೂಜಿ, “ನೀನು ನನ್ನ ಸಣ್ಣ ತಮ್ಮ’’ ಎಂದು ಹೇಳಿಕೊಳ್ಳುತ್ತಿದ್ದರು ಎಂಬ ಮಾತನ್ನು ನೆನಪಿಸಿಕೊಂಡರು.

ಹಳ್ಳಿಯ ಸಂದೇಶ ದಿನ ಪತ್ರಿಕೆಯ ಸಂಪಾದಕ ಕುಂತಿನಾಥ ಕಲಮನಿ ಮಾತನಾಡಿ, ಮುಚಳಂಬಿಯವರು ತಮ್ಮದೇ ವಿಶೇಷ ವ್ಯಕ್ತಿತ್ವವನ್ನು ಬಳಸಿಕೊಂಡು ನಾಡಿನ ಗಮನ ಸೆಳೆದ ವ್ಯಕ್ತಿ , ರಾಜಕೀಯದಲ್ಲಿದ್ದರೂ ಸ್ವಾರ್ಥ ರಾಜಕಾರಣಿಗಳನ್ನು ವಿರೋಧಿಸುತ್ತಲೇ ಬಂದವರಾಗಿದ್ದರು.

 

ಇಂದಿನ ದಿನಮಾನಗಳಲ್ಲಿ ಬಹುತೇಕ ಯಾವುದೇ ಸಂಪಾದಕರು ಇನ್ನೊಬ್ಬ ಸಂಪಾದಕರಿಗೆ ಸಹಕಾರ ನೀಡುವುದು ವಿರಳ, ಆದರೆ ನಾನು ಹಳ್ಳಿಯ ಸಂದೇಶ ದಿನಪತ್ರಿಕೆ ಆರಂಭಿಸುವ ಸಂದರ್ಭದಲ್ಲಿ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದಲ್ಲದೇ ಪತ್ರಿಕೆಗೆ ಯಾವುದೇ ತೊಂದರೆ ಆದರೂ ಆದಷ್ಟು ಸಹಾಯ ಸಹಕಾರ ನೀಡುವುದಾಗಿ ಕಲ್ಯಾಣರಾವ್ ಮುಚಳಂಬಿ ಅವರು ಅಂದು ಧೈರ್ಯ ತುಂಬಿದ್ದರು ಎಂದು ನೆನಪಿಸಿಕೊಂಡರು.

ಸAಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ್ತಿ ಕೀರ್ತಿ ಶೇಖರ ಮಾತನಾಡಿ, ಕಲ್ಯಾಣರಾವ್ ಮುಚಳಂಬಿ ಅವರ ಪತ್ರಿಕಾ ಕಾರ್ಯಲಯಕ್ಕೆ ಭೇಟಿ ನೀಡಿದಾಗ ಅವರ ಸಾಧನೆಯ ಮಜಲುಗಳನ್ನು ಅರಿಯಲು ಸಾಧ್ಯವಾಯಿತು ಎಂದು ವಿವರಿಸುತ್ತ, ಪತ್ರಿಕೆಗಳ ಅಕ್ಷರ ಜೋಡನೆಯ ಜೊತೆ ಜೊತೆಗೆ ಸಾಹಿತ್ಯ, ಕಲಾವಿದರಿಗೂ ಯಾವುದೇ ಲಾಭವಿಲ್ಲದೇ ಸಹಾಯ ಮಾಡುತ್ತಿದ್ದರಲ್ಲದೇ, ಕೆಲ ಪ್ರತಿಭಾವಂತ ಬಡ ಬರಹಗಾರರ ಪುಸ್ತಕ ಮುದ್ರಣಕ್ಕೂ ಕಲ್ಯಾಣರಾವ್ ಮುಚಳಂಬಿ ಅವರು ಸಹಾಯ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.

ನಾಡೋಜ ದಿನ ಪತ್ರಿಕೆಯ ಸಂಪಾದಕ ಸಲೀಮ ಧಾರವಾಡಕರ್ ಮಾತನಾಡಿ, ಕಲ್ಯಾಣರಾವ್ ಮುಚಳಂಬಿ ಅವರು ಪ್ರತಿ ಕ್ಷೇತ್ರದಲ್ಲಿಯೂ ಒಂದು ಹೆಜ್ಜೆ ಇಡಬೇಕು ಎಂದು ಬಯಸಿದವರಾಗಿದ್ದರು. ಬಯಸಿದಂತೆಯೇ ಎಲ್ಲ ರಂಗಗಳಲ್ಲೂ ಹೆಜ್ಜೆ ಇಟ್ಟು ಅನುಭವಗಳನ್ನು ಪಡೆದುಕೊಂಡರು ಎಂದು ಹೇಳಿದರು. ಬೆಳಗಾವಿ ಜಿಲ್ಲಾ ಮಟ್ಟದ ಪತ್ರಿಗಳ ಇಂದಿನ ಸ್ಥಿತಿ ಗತಿಗಳನ್ನು ಮೆಲುಕು ಹಾಕಿದ ಸಲೀಮ ಧಾರವಾಡಕರ್, ಪತ್ರಿಕಾ ಉದ್ಯಮದಲ್ಲಿ ಹಿರಿಯರಾಗಿದ್ದ ರಾಘವೇಂದ್ರ ಜೋಶಿ, ಉಮಾದೇವಿ ಟೋಪಣ್ಣವರ ಅವರ ಅಗಲಿಕೆಯಿಂದ ಪತ್ರಕರ್ತರ ಸಂಘಟನೆ ನಿಷ್ಕಿçÃಯವಾಗಿತ್ತು. ಅದಕ್ಕೆ ಭಲಿಷ್ಠ ಧ್ವನಿಯಾಗಿದ್ದ ಕಲ್ಯಾಣರಾವ್ ಮುಚಳಂಬಿ ಅವರ ಅಗಲಿಕೆ ಮತ್ತಷ್ಟು ನೋವು ತಂದಿದೆ ಎಂದರು.

ಸಿರಿನಾಡು ದಿನ ಪತ್ರಿಕೆಯ ಸಂಪಾದಕ ಟೋಪಣ್ಣವರ ತಮ್ಮ ಅಭಿಪ್ರಾಯ ಸಲ್ಲಿಸುತ್ತ, ಒಂದು ಪತ್ರಿಕೆಯನ್ನು ಹೇಗೆ ಮತ್ತು ಯಾವ ಮಟ್ಟದಲ್ಲಿ ಬೆಳೆಸಿ ಉಳಿಸಿಕೊಳ್ಳಬೇಕು ಎಂಬುದನ್ನು ಕಲ್ಯಾಣರಾವ್ ಮುಚಳಂಬಿ ಅವರೇ ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು. ಪತ್ರಿಕೆಗಾಗಿ ಬೆಳಿಗ್ಗೆ ೬ ಕ್ಕೆ ತಮ್ಮ ಬದುಕಿನ ಓಟ ಆರಂಭಿಸಿದರೆ ರಾತ್ರಿ ೧೦ ವರೆಗೂ ಅವರು ವಿಶ್ರಮಿಸುತ್ತಿರಲಿಲ್ಲ ಎಂದರು.

ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಕಚೇರಿಯ ಹಿರಿಯ ಪತ್ರಕರ್ತ ರಾಜೇಂದ್ರ ಪಾಟೀಲ ಅವರು, ಕಲ್ಯಾಣರಾವ್ ಮುಚಳಂಬಿ ಅವರೊಂದಿಗಿನ ಒಡನಾಟವನ್ನು ತಂದೆ-ತಾಯಿ ಹಾಗೂ ಮಕ್ಕಳ ವಾತ್ಸಲ್ಯಕ್ಕೆ ಹೋಲಿಸಿ ಮಾತನಾಡಿದರು.

ಮುಂಜಾನೆ ಎಕ್ಸಪ್ರೆಸ್ ಸಂಪಾದಕ ರಾಜು ನಧಾಪ್, ಕನ್ನಡಮ್ಮ ಪತ್ರಿಕೆಯ ಲೀನಾ ಟೋಪಣ್ಣವರ, ಹಿರಿಯ ಪತ್ರಕರ್ತರಾದ ಶ್ರೀಶೈಲ ಮಠದ, ಘೋಡಗೇರಿ ಬಸು , ರಾಜೇಂದ್ರ ಪವಾರ, ಮತ್ತಿತರರು ಸಭೆಯಲ್ಲಿ ಮಾತನಾಡಿದರು.

ಇಂದಿನ ಶ್ರದ್ಧಾಂಜಲಿ ಸಭೆಯಲ್ಲಿ ಭಾರತ ವೈಭವ ಪತ್ರಿಕೆಯ ಸಂಪಾದಕ ಎನ್. ಪ್ರಶಾಂತರಾವ್, ಸುವರ್ಣಲೋಕ ಪತ್ರಿಕೆಯ ಸಂಪಾದಕ ಸುರೇಶ ನೇರ್ಲಿ, ಲೋಕವಾರ್ತೆಯ ಸಂಪಾದಕ ಹಿರೋಜಿ ಮಾವರಕರ್, ಜನಜೀವಾಳ ಸಂಪಾದಕ ಶಿವರಾಯ ಏಳುಕೋಟೆ, ಬೆಳಗಿನ ಸುರ್ಯೋದಯ ಸಂಪಾದಕ ಗುರುರಾಜ ಕದಮ್, ಪತ್ರಕರ್ತರಾದ ರವಿ ಉಪ್ಪಾರ, ಸುನಿತಾ ದೇಸಾಯಿ, ಮನೋಹರ ಕಾಲಕುಂದ್ರಿಕರ್, ಹಸಿರು ಕ್ರಾಂತಿಯ ವ್ಯವಸ್ಥಾಪಕ ಬಿ.ಎಸ್.ಹೊಂಗಲ, ಸದಾನಂದ ಮಜತಿ,ಹುಕ್ಕೇರಿಯ ರಾಜು ಕುರಂದವಾಡೆ, ಸುಹಾಸ ಹುದ್ಧಾರ, ಲುಯಿಸ್ ರೇಡ್ರಿಗ್ಸ್, ಎಸ್.ಬಿ.ಪಾಟೀಲ, ಮಲ್ಲಿಕಾರ್ಜುನ ಹೆಗ್ಗಿನಾಯಿಕ, ಸಾಹಿತಿ ವಿಜಯಲಕ್ಷಿö್ಮÃ ಸೇರಿದಂತೆ ಮಾದ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಅನೇಕರು ಉಪಸ್ಥಿತರಿದ್ದರು.


Leave a Reply