Belagavi

ಗ್ಯಾಂಬ್ಲಿಂಗ್ ಗುಂಪಿನ ಹೆಡೆಮುರಿ ಕಟ್ಟಿದ ಬೆಳಗಾವಿ ಪೋಲಿಸ್


ಬೆಳಗಾವಿ: ಬೆಳಗಾವಿ ನಗರದ ಹೀರಾ ಟಾಕೀಸ್ ಹತ್ತಿರ ಖುಲ್ಲಾ ಜಾಗೆ ಸಾರ್ವಜನಿಕ ಸ್ಥಳದಲ್ಲಿ ಗ್ಯಾಂಬ್ಲಿಂಗ್ ಆಡುತ್ತಿದ್ದ ಎಂಟು ಜನ ಆರೋಪಿಗಳನ್ನು ಬೆಳಗಾವಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವರಾತ್ರಿ ಹಬ್ಬದ ನಿಮಿತ್ಯ ನಗರದಲ್ಲಿ ಅಲ್ಲಲ್ಲಿ ಗ್ಯಾಂಬ್ಲಿಂಗ್ ಆಟಗಾರರ ಗುಂಪುಗಳು ತಲೆ ಎತ್ತುತ್ತಿದ್ದು ಅವುಗಳನ್ನು ಮಟ್ಟಹಾಕಲು ಪೋಲಿಸ ಪಡೆ ಹದ್ದಿನ ಕಣ್ಣಿಟ್ಟಿದ್ದು ಹಾಕಲು ಡಿಸಿಪಿ ವಿಕ್ರಂ ಆಮಟೆ ಮಾರ್ಗದರ್ಶನದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ವಿಠ್ಠಲ ಹಾವನ್ನವರ ನೇತೃತ್ವದ ತಂಡ ಗ್ಯಾಂಬ್ಲಿಂಗ್ ಗುಂಪೊಂದನ್ನು ಬಂಧಿಸಿದೆ

ಬಂಧಿತರಿಂದ 9 ಮೊಬೈಲ್ ಫೋನ್ ಹಾಗೂ 85,890 ರೂಪಾಯಿ ನಗದು ಜಪ್ತಿ ಮಾಡಿದ್ದು ಈ ಕರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


Leave a Reply