Belagavi

ಜಿಲ್ಲೆಯ ಕಾನೂನು ಪದವೀಧರ ವಿದ್ಯಾರ್ಥಿ ಸಂಜು .ಎಸ್ .ಕಟ್ಟಿಮನಿ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‌ಗೆ ಸೇರ್ಪಡೆ


ವಿಜಯಪುರ : ಜಿಲ್ಲೆಯ ಅಂಜುಮನ್ ಲಾ ಕಾಲೇಜಿನ ಕಾನೂನು ಪದವೀಧರ ವಿದ್ಯಾರ್ಥಿಯಾದ ಸಂಜು. ಎಸ್ .ಕಟ್ಟಿಮನಿ ಅವರು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‌ಗೆ ಸೇರ್ಪಡೆಯಾದ ಪ್ರಯುಕ್ತ ಶುಕ್ರವಾರದಂದು ಬೆಂಗಳೂರಿನ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಸ್ವೀಕರಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಬಾಬು.ಎಲ್ ಅವರು ಸೇರಿದಂತೆ ಶ್ರೀ ಹನುಮಂತರಾಯಪ್ಪ, ಶ್ರೀ ಅನಿಲ್ ಕುಮಾರ್, ಶ್ರೀ ದೇವರಾಜ, ಶ್ರೀ ವಿನಯ್ ಮಂಗಳೆಕರ್ ಅವರು ಪ್ರಮಾಣಪತ್ರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾನೂನು ಪದವೀಧರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Leave a Reply