Belagavi

ಕಾಂಕ್ರೀಟ್ ರಸ್ತೆ ನಿರ್ಮಿಸಲು ಆಗ್ರಹ


ಬೈಲಹೊಂಗಲ 9:-  ಪಟ್ಟಣದ ದೇವಲಾಪುರ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಆಶ್ರಯ ಕಾಲನಿಯಲ್ಲಿರುವ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಬೇಕೆಂದು ಆಗ್ರಹಿಸಿ ಕಾಲನಿಯ ನಿವಾಸಿಗಳು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಅರ್ಪಿಸಿದರು.

ಆಶ್ರಯ ಕಾಲನಿಯ ರಸ್ತೆಗಳು ತುಂಬಾ ಹದಗೆಟ್ಟು  ರಸ್ತೆಗಳು ತಗ್ಗು ದಿಣ್ಣೆಗಳಾಗಿ ಮಳೆ ನೀರಿನಿಂದ ಕೊಳಚೆಗಳಾಗಿವೆ ಇದರಿಂದ ಈ ರಸ್ತೆಯಲ್ಲಿ ಸಂಚರಿಸಲು ತುಂಬಾ ತೊಂದರೆಯಾಗಿದೆ. ಮಕ್ಕಳು ವಯೋವೃದ್ಧರು  ನಡೆದಾಡುವದು ಬಹಳ  ಕಷ್ಟಕರವಾಗಿದೆ. ಆದ್ದರಿಂದ ಈ ರಸ್ತೆಗಳನ್ನು ದುರಸ್ತಿ ಗೊಳಿಸಿ ಕಾಂಕ್ರೀಟ್ ರಸ್ತೆಗಳನ್ನು ದುರಸ್ತಿಗೊಳಿಸಿ ಕಾಂಕ್ರೀಟ್ ರಸ್ತೆ  ನಿರ್ಮಿಸಬೇಕೆಂದು ಆಗ್ರಹಿಸಿ ಕಾಲನಿಯ ನಿವಾಸಿಗಳಾದ ಮಲ್ಲವ್ವ  ಯರಗಟ್ಟಿ,  ಸುಶೀಲಾ ಕುಬಸದ, ನೀಲಮ್ಮ  ದೊಡ್ಡಮನಿ,  ಶಾಂತವ್ವ ಪಾಟೀಲ,  ಪಾರ್ವತಿ ತಳವಾರ,  ಗಂಗಮ್ಮ ಸಾಲೋಟಗಿ, ಸೇರಿದಂತೆ ಅನೇಕ ಮಹಿಳೆಯರು ಶಾಸಕ ಮಹಾಂತೇಶ ಕೌಜಲಗಿ  ಅವರಿಗೆ ಶುಕ್ರವಾರ ಮನವಿ ಅರ್ಪಿಸಿದರು.

ಈಗಾಗಲೇ ಆಶ್ರಯ ಕಾಲನಿಯಲ್ಲಿ ಕೆಲವು ರಸ್ತೆಗಳನ್ನು ಕಾಂಕ್ರೀಟ್  ಮಾಡಲಾಗುತ್ತಿದ್ದು  ಬರುವ ದಿನಗಳು ಇನ್ನುಳಿದ ರಸ್ತೆಗಳನ್ನು ಕಾಂಕ್ರೀಟ್  ಮಾಡಲಾಗುವುದು ಎಂದು ಶಾಸಕ ಕೌಜಲಗಿ ಭರವಸೆ  ನೀಡಿದರು.

 


Leave a Reply