Belagavi

ದುರ್ಗಾಮಾತಾ ನಾಡಿನಲ್ಲಿ ಸುಖ ಸಮೃದ್ಧಿ ನೀಡಲಿ: ಡಾ.ವಿಶ್ವನಾಥ ಪಾಟೀಲ


ಬೈಲಹೊಂಗಲ ೯- ದೇಶದೆಲ್ಲಡೆ ನವದುರ್ಗೆ ಪೂಜೆಯನ್ನು ಅತ್ಯಂತ ಭಕ್ತಿಭಾವದಿಂದ ಆಚರಣೆ ಮಾಡುತ್ತಿದ್ದು ತಾಯಿ ದುರ್ಗಾಮಾತಾ ನಾಡಿನಲ್ಲಿ ಸುಖ,ಸಮೃದ್ದಿ ದಯಪಾಲಿಸಲಿ ಎಂದು ಬೆಳಗಾವಿ ಕಾಡಾ ಅಧ್ಯಕ್ಷ ಡಾ ವಿಶ್ವನಾಥ ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಮುರಗೋಡ ರಸ್ತೆಯ ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವ ನಿಮಿತ್ಯ , ಚಂಡಿಕಾ ಯಾಗ, ದುರ್ಗಾ ಪಾರಾಯಣದ ಒಂದು ಲಕ್ಷ ಜಪ ಪ್ರಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂಬತ್ತು ದಿನಗಳ ಕಾಲ ದೇವಸ್ಥಾನದ ಧರ್ಮದರ್ಶಿ ಡಾ. ಮಹಾಂತೇಶ ಶಾಸ್ತ್ರೀಗಳು ಲೋಕ ಕಲ್ಯಾಣಕ್ಕಾಗಿ, ದೇವಿ ಪಾರಾಯಣ, ನವಚಂಡಿಕಾ ಹೋಮ ಹಮ್ಮಿಕೊಂಡಿದ್ದು ಶ್ಲಾಘನಿಯವಾದದ್ದು. ಪ್ರಧಾನಿ ನರೇಂದ್ರ ಮೋದಿಯವರು ಒಂಬತ್ತು ದಿನಗಳ ಕಾಲ ಅತ್ಯಂತ ಕಠಿಣ ಉಪವಾಸ ವೃತ ಕೈಗೊಂಡು ದೇವಿ ಆರಾಧನೆ ಮಾಡುವ ಭಕ್ತಿ ನಿಜಕ್ಕೂ ಮೆಚ್ಚುವಂತಹದು ಎಂದರು.
ಸಾನಿಧ್ಯ ವಹಿಸಿದ್ದ ದೇವಸ್ಥಾನದ ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರಿö್ತ ಆರಾದ್ರಿಮಠ ಮಾತನಾಡಿ, ನಾಮಜಪ ಮಾಡುವದರಿಂದ ದೇವಿಯ ಅನುಭೂತಿಯು ಸಿಗುವುದು, ನವರಾತ್ರಿ ಸಂದರ್ಬದಲ್ಲಿ ದೇವಿತತ್ವವು ಎಂದಿಗಿAತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವದರಿಂದ ದೇವೀತತ್ವದ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದರು.
ಅತಿಥಿಗಳಾಗಿ ಆಗಮಿಸಿದ ಮಾಜಿ ಜಿಪಂ.ಸದಸ್ಯ ಬಾಬಾಸಾಹೇಬ ಪಾಟೀಲ, ಜಿಪಂ.ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ದೇವಿ ಆರಾಧನೆ ಮಾಡುವುದರಿಂದ ಸಕಲ ಕಷ್ಟಗಳು ದೋಷಗಳು ಪರಿಹಾರವಾಗುತ್ತವೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅನಂತಕುಮಾರ್ ಬ್ಯಾಕೋಡ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ,್ದ ಅಡಿವೆಪ್ಪ ಕಾಜಗಾರ, ಸಿದ್ರಾಮ ಲಿಂಗಶೆಟ್ಟಿ, ಕುಮಾರ ರೇಶ್ಮಿ ಸೇರಿದಂತೆ ದೇವಸ್ಥಾನದ ಸದ್ಭಕ್ತರು ಇದ್ದರು. ಇದೇ ಸಂದರ್ಬದಲ್ಲಿ ಗಣ್ಯಮಾನ್ಯರನ್ನು ಸನ್ಮಾನಿಸಲಾಯಿತು.


Leave a Reply