Koppal

ಪಾರ – ದೇವೆಂದ್ರ ನಾಯಕ. “ನನ್ನ ಶಾಲೆಗೆ ನನ್ನ ಕೊಡುಗೆ ಶೈಕ್ಷಣೀಕ ಯೋಜನೆ” ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಸದಸ್ಯರಿಂದ ಚಾಲನೆ


ನನ್ನ ಶಾಲೆಗೆ ನನ್ನ ಕೊಡುಗೆ :
ಶಿಕ್ಷಕ ದಂಡಪ್ಪ ಬಿರಾದಾರ್ ಕ್ರಿಯಾಶೀಲತೆ, ಶೈಕ್ಷಣಿಕ ಕೊಡಿಗೆ ಅಪಾರ – ದೇವೆಂದ್ರ ನಾಯಕ.

“ನನ್ನ ಶಾಲೆಗೆ ನನ್ನ ಕೊಡುಗೆ ಶೈಕ್ಷಣೀಕ ಯೋಜನೆ”
ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಸದಸ್ಯರಿಂದ ಚಾಲನೆ

ರಾಯಚೂರು: ಅ,೧೦, ತಾಲೂಕಿನ ಉಡುಮಗಲ್ ಖಾನಾಪುರ ಪ್ರೌಢ ಶಾಲೆಯ ಕನ್ನಡ ಕಲಾ ಶಿಕ್ಷಕರಾದ ಡಾ॥ ದಂಡಪ್ಪ ಬಿರಾದಾರ್ ಸ್ವಂತ ಖರ್ಚಿನಿಂದ ಶಾಲೆಯ ಒಂದು ತರಗತಿಯನ್ನು ನನ್ನ ಶಾಲೆಗೆ ನನ್ನ ಕೊಡುಗೆ ಶೈಕ್ಷಣೀಕ ಯೋಜನೆ ಹಿನ್ನೆಲೆಯಲ್ಲಿ ದತ್ತು ತೆಗೆದುಕೊಂಡು ಒಂದು ತರಗತಿಯ ಒಳಗಡೆ ರಾಷ್ಟ್ರನಾಯಕರ ,ಸಮಾಜ ಸುಧಾರಕರ, ಪ್ರಸಿದ್ಧ ವಿಜ್ಞಾನಿಗಳ ,ಭಾರತದೇಶ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ, ವೀರ ಮಹಿಳೆಯರು ಭಾವಚಿತ್ರ ನಾಮಫಲಕ ಅಳವಡಿಸುವ ಮೂಲಕ ವಿದ್ಯಾರ್ಥಿ ಗಳ ಕಲಿಕೆಗೆ ಸಹಕಾರ ನೀಡಿರುವುದು ಸಂತೋಷ ದ ವಿಷಯ ಎಂದು ಉಡುಮಗಲ್ ಖಾನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವೆಂದ್ರ ನಾಯಕ ಹೇಳಿದರು.

ಅವರಿಂದು “ನನ್ನ ಶಾಲೆಗೆ ನನ್ನ ಕೊಡುಗೆ ಶೈಕ್ಷಣೀಕ ಯೋಜನೆ” ಚಾಲನೆ ನೀಡಿ ಮಾತನಾಡಿ ದಂಡಪ್ಪ ಬಿರಾದಾರ ಅವರ
ಕ್ರಿಯಾಶೀಲತೆ ಮತ್ತು ಶೈಕ್ಷಣಿಕ ಕೊಡುಗೆ ಶಾಲೆಗೆ ಅಪಾರವಾಗಿದೆ ಶಾಲಾ ಕೊಠಡಿಯಲ್ಲಿ ೧೨ ನೇ ಶತಮಾನದ ಅನುಭವ ಮಂಟಪದಲ್ಲಿಯ ಶರಣರ, ರಾಷ್ಟ್ರೀಯ ನಾಯಕರ ಭಾವಚಿತ್ರ ಅವರ ಕೊಡುಗೆ ವಿಚಾರ ತಿಳಿಯಲು ವಿದ್ಯಾರ್ಥಿಗಳಿಗೆ ತುಂಬ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ಮಾತನಾಡಿ ಬಿರಾದಾರ ರವರು ನಮ್ಮ ಶಾಲೆಗೆ ಬಂದ ಮೇಲೆ ಹಲವಾರು ರೀತಿಯ ಉತ್ತಮ ಕಾರ್ಯಗಳು ನಡೆಯುತ್ತಲಿವೆ ಶಾಲೆಯ ಎಸ್ಸೆಸ್ಸೆಲ್ಸಿ 114ವಿದ್ಯಾರ್ಥಿಗಳಿಗೆ ಟ್ಯಾಬ್ ದೊರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಗ್ರಾಮ ಪಂಚಾಯಿತಿಯ ಮೂಲಕ ನಮ್ಮ ಶಾಲೆಗೆ ಬಿಸಿಯೂಟದ ಕೋಣೆ ಭೋಜನಾಲಯ ಮತ್ತು ಶೌಚಾಲಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಪಿಡಿಒ ರವರನ್ನು ಸಂಪರ್ಕ ಮಾಡಿ ನಮ್ಮ ಶಾಲೆಗೆ ಇವುಗಳ ಸೌಲಭ್ಯ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ .ತಮ್ಮ ಮಗನ ಮತ್ತು ಮಗಳ ಹುಟ್ಟುಹಬ್ಬದ ಅಂಗವಾಗಿ ಶಾಲೆಗೆ ಪ್ಲೇಟು ಗ್ಲಾಸುಗಳನ್ನ ಕೊಡುವುದರ ಮೂಲಕ ಸಸಿ ನೆಡುವ ಕಾರ್ಯಕ್ರಮವನ್ನು ಮಾಡಿ ಪರಿಸರದ ಅಭಿಮಾನವನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ಶ್ರೀ ವೀರೇಂದ್ರ ಪಾಟೀಲ್ ಶಿಕ್ಷಕರು ಮಾತನಾಡಿ .ಡಾ. ಬಿರಾದಾರ್ ಅವರು ಜೆಸಿಐ ವತಿಯಿಂದ 6 ವಿದ್ಯಾರ್ಥಿಗಳಿಗೆ ತಲಾ 1 ಸಾವಿರೂ ನಗದು ಬಹುಮಾನವನ್ನು ವಿದ್ಯಾರ್ಥಿಗಳಿಗೆ ಕೊಡಿಸಿದ್ದಾರೆ, ರೆಡ್ ಕ್ರಾಸ್ ಸಂಸ್ಥೆಯಿಂದ ಮಾಸ್ಕ್ ಮತ್ತು ಸಾಬೂನುಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಉಚಿತವಾಗಿ ಕೊಡಿಸಿದ್ದಾರೆ ವಾರದಲ್ಲಿ ಕನಿಷ್ಠ 2 ಕಾರ್ಯಕ್ರಮಗಳನ್ನು ನಮ್ಮ ವೃತ್ತಿಪರ ವಿಷಯ ಶಿಕ್ಷಕರಾದ ಪಾಂಡುರಂಗ ದೇಸಾಯಿಯವರು ಸಂಗಡ ಸೇರಿ ಸಸಿ ನೆಡುವ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಹೇಳಿದರು.

ಗೌರವ ಡಾಕ್ಟರೇಟ್ ಪಡೆದ ಹಿನ್ನಲೆಯಲ್ಲಿ ಡಾ॥ ದಂಡಪ್ಪ ಬಿರಾದಾರ ಇವರನ್ನು ಶಾಲೆಯ ಮುಖ್ಯಗುರುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು,ಮತ್ತು ಶಾಲಾ ಶಿಕ್ಷಕ ವೃಂದದವರು ಸನ್ಮಾನಿಸಿ ಗೌರವಿಸಿದರು.

ನಂತರ ಬಿರಾದರ್ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರವೇಶ ಮಾಡಲು ಅವಕಾಶವನ್ನು ಮಾಡಿಕೊಟ್ಟು ಸಾಮಾನ್ಯ ಸಭೆ ನಡೆಸುವ ಕುರಿತು ಅವಕಾಶ ಮಾಡಿಕೊಟ್ಟಂತಹ ಅಧ್ಯಕ್ಷ ಮತ್ತು ಸದಸ್ಯರಿಗೆ ಧನ್ಯವಾದಗಳು ತಿಳಿಸಿ ಕೋವಿಡ್ -19 ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರು ಸಹಕಾರ ಕೋಟ್ಟಿದ್ದಾರೆ, ಶ್ರೀ ಹುಲಿಗಪ್ಪ ಗ್ರಾಮ ಪಂಚಾಯಿತಿ ಸದಸ್ಯರು ನನ್ನ ಬೇಡಿಕೆಯಂತೆ ನೂರು ಗಿಡಗಳನ್ನು ದೇಣಿಗೆ ಕೊಟ್ಟಿದ್ದಾರೆ,
ಶಾಲೆಯ ಈ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶೇಕಡಾ ತೊಂಬತ್ತು ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ 1 ಸಾವಿರೂ ನಂತೆ ಜೆ ಸಿ ಐ ಯಿಂದ ಕೊಡಿಸುತ್ತೇನೆ ಹಾಗೂ ಉಡಮಗಲ್ ಖಾನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರಲ್ಲಿ ತಾವು ಮಾದರಿಯ ಭೋಜನಾಲಯ, ಮಾದರಿಯ ಕ್ರೀಡಾಂಗಣ, ಮಾದರಿಯ ಶೌಚಾಲಯ ನಿರ್ಮಾಣ ಮಾಡಿ ನಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡರು.

ನನ್ನ ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಶಾಲೆಯ ಮುಖ್ಯಗುರುಗಳಾದ ವಿರೇಶ್ ಅಂಗಡಿ, ವೀರೇಂದ್ರ ಪಾಟೀಲ್, ಪಾಂಡುರಂಗ ದೇಸಾಯಿ, ಶರಣಪ್ಪ ನಾಯ್ಕ್ ಶ್ರೀಮತಿ ನಫೀಸಾ , ಲಕ್ಷ್ಮೀದೇವಿ ಯಾದವ್, ಶಿವಲೀಲಾ, ಶಶಿಕಲಾ, ಸಾವಿತ್ರಿ, ಹಾಗೂ ಅರುಣಾ ಬಿರಾದರ ಅವರ ಸಹಕಾರ ಪ್ರೋತ್ಸಾಹವೇ ಕಾರಣ ವಾಗಿದೆ ಎಂದು ಹೇಳಿದರು.

ಶರಣಪ್ಪ ನಾಯ್ಕ್ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು, ಅರುಣ ಬಿರಾದಾರ ಸ್ವಾಗತಿಸಿದರು, ಪಾಂಡುರಂಗ ದೇಸಾಯಿ ವಂದಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ ವೆಂಕಟೇಶ್ ನಾಯ್ಕ್, ಗೋವಿಂದ್ ನಾಯ್ಕ್ ,ಪರುಶುರಾಮ್, ಹುಲಿಗಪ್ಪ, ರಾಘವೇಂದ್ರ, ನರಸಪ್ಪ, ಹಾಗೂ ಗ್ರಾಮಸ್ಥರು ಸೇರಿದಂತೆ ಶಾಲಾ ಶಿಕ್ಷಕ ವೃಂದದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಶ್ವನಾಥ ಸಾಹುಕಾರ
ರಾಯಚೂರು.


Leave a Reply