Belagavi

ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ ಗಾಂಜಾ ವಶ


ಬೆಳಗಾವಿ: ಹುಕ್ಕೇರಿ ಪಿಎಸ್ಐ ಉನ್ನತ ನೇತೃತ್ವದಲ್ಲಿ ಅಕ್ರಮ ಗಾಂಜಾ ವಶ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ ಕೆ ಗ್ರಾಮದಲ್ಲಿ ಆಕ್ರಮವಾಗಿ ಗಾಂಜಾ ಮಾದಕ ಗಿಡಗಳನ್ನು ಬೆಳೆಸಿ ಮಾರಾಟ ಮಾಡಲು ಯತ್ನಿಸಿದಾಗ ಪೋಲಿಸರ ಕೈಗೆ ಸಿಕ್ಕ ಮೀರಾಸಾಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ಶಿರಹಟ್ಟಿ ಬಿ ಕೆ ಗ್ರಾಮದ ಮಿರಾಸಾಬ ಕಾಶಿಂಸಾಬ ಅಮ್ಮಣಗಿ ಇವನು ತನ್ನ‌ ಹೊಲದ 229 ಸರ್ವೆ ನಂಬರ ಜಮಿನಿನಲ್ಲಿ ಕಬ್ಬಿನ ಬೆಳೆಯಲ್ಲಿ ಸ್ವಂತ ಲಾಭಕ್ಕಾಗಿ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದು ಮಾರಾಟ ಮಾಡಲು ಕಿತ್ತಾಗ ಪೋಲಿಸರ ಕೈಗೆ ಸಿಕ್ಕು ಎನ್ ಡಿ ಪಿ ಎಸ್ ಆ್ಯಕ್ಟ 20 A ಕಲಂ ಅನ್ವಯ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬಂದಿತನಿಂದ ಸುಮಾರು 4ಕೆಜಿ 800ಗ್ರಾಂ 24000 ರೂಪಾಯಿ ಮೌಲ್ಯದ ರೂಪಾಯಿಗಳ ಗಾಂಜಾ ಜಪ್ತಮಾಡಲಾಗಿದೆ.

ಹುಕ್ಕೇರಿ ಪಿಎಸ್ಆಯ ಸಿದ್ದರಾಮಪ್ಪ ಉನ್ನದ ನೇತೃತ್ವದ ತಂಡ ಭರ್ಜರಿ ಗಾಂಜಾ ಮಾರುವವನ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಪ್ರೋಭೇಷನರಿ ತಹಸಿಲ್ದಾರ ಸಂತೋಷ ಹಿರೇಮಠ ಎ ಎಸ್ ಆಯ್ ರಮೇಶ ಉಪ್ಪಾರ, ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರ, ಮುಸಾ ಅತ್ತಾರ, ರಮೇಶ ಖೇತ್ರಿ, ಗುರನಗೌಡರ, ಅಜೀತ ನಾಯಿಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರು.


Leave a Reply