Belagavi

ದೇವರ ಪೋಟೊಗಳಿಗೆ ಶಾಸ್ತ್ರೋಪ್ತವಾಗಿ ಕಾರ್ಯ: ವೀರೇಶ್ ಹಿರೇಮಠ ಸಮಾಜ ಕಾರ್ಯಕ್ಕೆ ಮೆಚ್ಚುಗೆ


ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶ್ರೀ ಕ್ಷೇತ್ರ ಯಲ್ಲಮ್ಮ ಗುಡ್ಡ, ಜಗನ್ಮಾತೆ ರೇಣುಕಾ ತಾಯಿ ದೇವಸ್ಥಾನದ ಸುತ್ತ ಮುತ್ತಲಿನಲ್ಲಿ ಜನರಿಗೆ ಬೇಡವಾಗಿ ಬಿಸಾಡಲಾಗಿರುವ ಹಿಂದೂ ಆರೈದ್ಯ ದೇವರ ಭಾವಚಿತ್ರಗಳನ್ನು, ಸರ್ವಲೋಕ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಹಿರೇಮಠ ಅವರ ನೇತೃತ್ವದಲ್ಲಿ ಪೋಟೊಗಳನ್ನು ಸಂಗ್ರಹಿಸಿ, ವಿಧಿಪೂರ್ವಕವಾಗಿ ವಿಸರ್ಜಿಸಲಾಯಿತು.

ಈ ವೇಳೆ ಸರ್ವಲೋಕ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಹಿರೇಮಠ ಅವರು ಮಾತನಾಡಿ, ಉತ್ತರ ಕರ್ನಾಟಕದ ಪುಣ್ಯ ಕ್ಷೇತ್ರವಾದ ಯಲ್ಲಮ್ಮನಗುಡ್ಡ ತಾಯಿಯ ದರ್ಶನ, ಆಶೀರ್ವಾದಕ್ಕಾಗಿ ಕೋಟ್ಯಾಂತರ್ ಭಕ್ತಾಧಿಕಾರಿಗಳು ದೇಶ- ವಿದೇಶ ಗಳಿಂದ ಆಗಮಿಸುತ್ತಾರೆ.

ಈ ಕ್ಷೇತ್ರದ ಜೀವನಾಡಿರುವ ಮಲಪ್ರಭಾ ನದಿಯ ದಡದಲ್ಲಿ ಜಗನ್ಮಾತೆ ರೇಣುಕೆ ತಾಯಿ ನೆಲೆಸಿದ್ದಾಳೆ. ಈ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇವರ ಛಾಯಾಚಿತ್ರಗಳು ಈ ರೀತಿಯಾಗಿ ಬಿಸಾಡುವುದರಿಂದ ನಮ್ಮ ಸಂಸ್ಕೃತಿಗೆ ಅಪಮಾನ ಮಾಡಿದಂತಾಗುತ್ತದೆ.

ಪೋಟೊಗಳು ಬೇಡವಾದ ಬಳಿಕ, ಅವುಗಳಿಗೆ ಶಾಸ್ತ್ರೋಪ್ತವಾಗಿ ಪೂಜೆ ನೇರವೆರಿಸಿ, ನದಿ ಹಾಗೂ ಅಗ್ನಿಸ್ಪರ್ಶಮಾಡಬೇಕೆಂದು ಸೂಚನೆ ನೀಡಿದರು.

ವೀರೇಶ್ ಹಿರೇಮಠ ಅವರ ಕಾರ್ಯಕ್ಕೆ ಮೆಚ್ಚುಗೆ:- ಭಕ್ತಾಧಿಕಾಧಿಗಳು ಬೇಡವಾದ ಪೋಟೊಗಳನ್ನು ಮರದ ಕೆಳಗೆ , ನದಿ ದಡದಲ್ಲಿಹಾಗೂ ದೇವಸ್ಥಾನದ ಪಕ್ಕದಲ್ಲಿ ಇರಿಸಿ ಹೋಗುತ್ತಾರೆ. ಕೋಟ್ಯಾಂತರ್ ಹಿಂದೂ ಆರಾಧಕರಿದ್ದರೂ ಸಹ, ಇವುಗಳಿಗೆ ಶಾಸ್ತ್ರೋಪ್ತ ಕಾರ್ಯ ಮಾಡದೇ, ಹಾಗೇ ಬಿಡಲಾಗಿತ್ತು. ಸಮಾಜ ಸೇವಕ ವೀರೇಶ್ ಅವರು ಈ ಪುಣ್ಯದ ಕಾರ್ಯದಲ್ಲಿ ತೊಡಗಿರುವುದು ಹಮ್ಮೆಯ ವಿಷಯ ಎಂದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಿಂಗಯ್ಯ ಬುರ್ಲಿ, ಕಟ್ಟಿ, ಬಾಳು ಕಣಬರ್ಕರ್, ಮಹೇಶ ರೆಡ್ಡಿ ,ಗೌರೀಶ ವೀರೇಶ್ ಹಿರೇಮಠ, ಆನಂದ ಭಾತ್ಕಂಡೆ, ಶಿವು ಬುರ್ಲಿ ಕಟ್ಟೆ ಹಾಗೂ ಇತರರು ಇದ್ದರು


Leave a Reply