Belagavi

ಬಡಾವಣೆಯ ಒಳಚರಂಡಿ ಸಮಸ್ಯೆಗೆ  ಯೋಜನೆ  ಸಿದ್ಧವಾಗಿದೆ. ಎಸ್.ಎಸ್.ಎಸ್.ಸಂಘದಿಂದ ಜರುಗಿದ  ಅಭಿನಂದನ ಕಾರ್ಯಕ್ರಮದಲ್ಲಿ  ಬೂಡಾ  ಅಧ್ಯಕ್ಷ, ಘೂಳಪ್ಪಾ  ಹೊಸಮನಿ  ಅಭಿಮತ.


ಬೆಳಗಾವಿ.  ೧೨. – ಇಲ್ಲಿಯ  ಜನರಿಗೆ ಸಮಸ್ಯೆ ಯಾಗಿರುವ  ಒಳಚರಂಡಿ  ಗೆ  ಸಂಬಂದಿಸಿದಂತೆ  ಯೋಜನೆ  ಸಿದ್ಧವಾಗಿದ್ದು  ಸದ್ಯದಲ್ಲಿ  ಅನುಷ್ಠಾನ ಗೊಳ್ಳಲಿದೆ. ಎಂದು  ಬೂಡಾ  ಅಧ್ಯಕ್ಷ ಘೂಳಪ್ಪಾ ಹೊಸಮನಿ  ಹೇಳಿದರು . ಅವರು  ಸೋಮವಾರ  ರಾಮತೀರ್ಥನಗರ  ಸ್ನೇಹ ಸಮಾಜ  ಸೇವಾ ಸಂಘದಿಂದ  ಜರುಗಿದ  ಸನ್ಮಾನ  ಸ್ವೀಕರಿಸಿ  ಮಾತನಾಡಿದರು.  ಹೊರವಲಯದಲ್ಲಿರುವ  ಇಂಥಹ  ಬಡಾವಣೆಯ  ವಿದ್ಯಾರ್ಥಿಗಳ  ಅಧ್ಯಯನಕ್ಕೆ  ಪೂರಕವಾಗುವಂತೆ  ಎಲ್ಲ  ಸೌಲಭ್ಯಗಳುಳ್ಳ  ಅಧ್ಯಯನ  ಕೇಂದ್ರ  ಒದಗಿಸಲಾಗುವದು.  ಇದಕ್ಕೆ  ಎಲ್ಲ  ಶಾಸಕರೂ, ಅಧಿಕಾರಿ  ವರ್ಗ  ಹಸಿರು  ನಿಶಾನೆ  ತೋರಿದ್ದು , ಪ್ರದೇಶ  ಜನರಿಗೆ  ಪರಿಪೂರ್ಣ  ಗ್ರಂಥಾಲಯ ಸೌಲಭ್ಯ  ಸಿಗಲಿದೆ . ಪ್ರತಿಯೊಬ್ಬರೂ ಕಾಲಹರಣ ಮಾಡದೇ  ಅಧ್ಯಯನ ದಲ್ಲಿ  ತೊಡಗಿ ಭವಿಷ್ಯವನ್ನು  ಗಟ್ಟಿಗೊಳಿಸಿ ಎಂದರಲ್ಲದೆ,  ಒಗ್ಗಟ್ಟಿನಿಂದ  ಕಾರ್ಯ ಸಾಧನೆ  ಸಾಧ್ಯ  ಎಂದರಲ್ಲದೆ,  ಸನ್ಮಾನಿಸಿದ  ಸಂಘಕ್ಕೆ  ಧನ್ಯವಾದ  ಹೇಳಿದರು.
ಅತಿಥಿಗಳಾಗಿದ್ದ    ರೇಷ್ಮೆ ಸಂಶೋಧನೆ ವಿಜ್ಞಾನಿ,   ಕಳ್ಳೀಗುದ್ದಿ  ಮೂಲದ   ಬೆಂಗಳೂರಿನ  ವ್ಹಿ.ಎಚ್.ಮಹಾರೆಡ್ಡಿ  ಮಾತನಾಡಿ, ಬದುಕಿನಲ್ಲಿ ಸಮಾಜಕ್ಕೆ  ಹಿತವೆನಿಸುವ ಕಾರ್ಯ ನಮ್ಮಿಂದಾದರೆ  ಜನ್ಮ  ಸಾರ್ಥಕಗೊಳ್ಳುವದು.  ಈ  ಗ್ರಂಥಾಲಯ ಕ್ಕೆ   ಪುಸ್ತಕಗಳನ್ನು  ದೇನಿಗೆ  ಕೊಡುವದಾಗಿ  ಭರವಸೆ  ನೀಡಿದರು.  ಅಧ್ಯಕ್ಷ ತೆ ವಹಿಸಿದ್ದ  ಮಾಜಿ  ಮಹಾಪೌರ ಮಾತನಾಡಿ, ಜನರ ಮತ್ತು  ಪ್ರದೇಶದ  ಸಮಸ್ಯೆಗಳ  ಕುರಿತು  ಸೂಕ್ತ  ಕ್ರಮ  ಜರುಗಿಸುವಂತೆ  ಕೋರಿದರು.   ಸ್ನೇಹ ಸಮಾಜ ಸೇವಾ  ಸಂಘದ  ಅಧ್ಯಕ್ಷ  ಸುರೇಶ  ಉರಬಿನಹಟ್ಟಿ  ಸ್ವಾಗತಿಸಿ  ಪ್ರಾಸ್ತಾವಿಕ  ಮಾತನಾಡಿ  ಸಂಘದ  ಉದ್ಧೇಶಗಳನ್ನು   ತಿಳಿಸಿದರು. ಇದೇ  ಸಂದರ್ಭದಲ್ಲಿ ಸಂಘಟೆನೆಯಿಂದ  ಘೂಳಪ್ಪಾ  ಹೊಸಮನಿ  ಅವರನ್ನು  ಸನ್ಮಾನಿಸಲಾಯಿತು    ಕಾರ್ಯಕ್ರಮದಲ್ಲಿ   ಸಂಘದ  ಕಾರ್ಯದರ್ಶಿ  ಎಸ್.ಸಿ.ಕಮತ, ಪದಾಧಿಕಾರಿಗಳಾದ   ಡಿ.ಎಮ್.ಟೊಣ್ಣೆ, ಮಹೇಶ ಮಾವಿನಕಟ್ಟಿ,  ಮಹೇಶ  ಚಿಟಗಿ,  ಬಿ.ಬಿ.ಕಮತೆ, ಮಲ್ಹಾರ ದಿಕ್ಷೀತ,  ಸಿ.ಎಸ್.ಖನಗಣ್ಣಿ, ನಜೀರ ಅಹಮದ್  ದಳವಾಯಿ, ದುಂಡಪ್ಪಾ  ಉಳ್ಳೇಗಡ್ಡಿ,  ಎಸ್.ಎಲ್.ಸನದಿ, ಜಿ.ಐ.ದಳವಾಯಿ, ಉದಯ  ಇಡಗಲ್, ಶ್ರೀಶೈಲ  ಹಿರೇಮಠ,  ಕಲ್ಲಪ್ಪಾ  ಮಜಲಟ್ಟಿ, ಮನೋಹರ  ಕಾಜಗಾರ,ಅನಂತ  ಹನ್ನಿಕೇರಿ, ಸೊಂಟಕ್ಕಿ,   ಆರ್.ಜಿ ಮೆಳವಂಕಿ ಮುಂತಾದವರಿದ್ದರು. ಪ್ರೊ.ಎ.ಕೆ.ಪಾಟೀಲ  ನಿರೂಪಿಸಿದರು..‌ ಎಸ್.ಸಿ.ಕಮತ  ವಂದಿಸಿದರು.

Leave a Reply