Belagavi

ಪೃಥ್ವಿರಾಜ ಅಶೋಕ ಕೋಂಗಾರಿಗೆ ಸೂಪರ್ ಡಾನ್ಸರ್ ಪ್ರಶಸ್ತಿ


ಬೆಳಗಾವಿ ೧೨ – ಸೋನಿ ದೂರದರ್ಶನದಲ್ಲಿ ಮೂಡಿಬರುತ್ತಿರುವ ಸೂಪರ್ ಡ್ಯಾನ್ಸರ್ ಸೀಸನ್ ೪ ರಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಬೆಳಗಾವಿಯ ಬಾಲಕ ಪೃಥ್ವಿರಾಜ ಅಶೋಕ ಕೋಂಗಾರಿ ಪಡೆದಿದ್ದಾನೆ. ಎಂಟು ತಿಂಗಳ ಸತತ ಪ್ರಯತ್ನದ ಬಳಿಕ ಸೂಪರ್ ಸೋನಿ ಟಿವಿಯ ಡಾನ್ಸ್ ೪ನೇ ಸಿಜನ್ ರನ್ನರ್ ಅಪ್‌ಆಗಿ ಆಯ್ಕೆಯಾಗಿದ್ದಾನೆ

ಬಾಲಕ ಪೃಥ್ವಿರಾಜ್ ಅವನಿಗೆ ಸೋನಿ ಟಿವಿಯ ಸಿ.ಇ.ಓ. ರಾದ ಯು. ಪಿ ಸಿಂಗ್ ಅವರು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.

ಪೃಥ್ವಿರಾಜ್ ಅವರ ತಂದೆ ಅಶೋಕ್ ಬಡ ಕೂಲಿ ನೇಕಾರಿಕೆ ಮಾಡುವ ಬಡಮನೆತನದಿಂದ ಬಂದವರು. ಪ್ರಥ್ವಿರಾಜ್ ಸರ್ಕಾರಿ ಕನ್ನಡ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿಯಾಗಿದ್ದು ವಾಸ ಮಾಡಲು ಸ್ವಂತ ಮನೆಯಿಲ್ಲ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ

ಬೆಳಗಾವಿ ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಸೇವಾ ಪ್ರತಿಷ್ಠಾನ ವತಿಯಿಂದ ಅಧ್ಯಕ್ಷರಾದ ಕೃಷ್ರರಾಜೇಂದ್ರ ತಾಳೂಕರ ಹಾಗೂ ರಾಘವೇಂದ್ರ ತಾಳೂಕರ, ಶ್ರೀನಿವಾಸ ಕಲ್ಯಾಣ ತಾಳೂಕರ, ವಿಶ್ವನಾಥ್ ತಾಳೂಕರ, ಅವರುಗಳೂ ಪೃಥ್ವಿರಾಜ್ ಅಶೋಕ್ ಕೋಂಗಾರಿ ಅವನನ್ನು ಸನ್ಮಾನಿಸಿ ಗೌರವಿಸಿದರು.

ಪೃಥ್ವಿರಾಜ್‌ನಿಗೆ ಕಿರಣ್ ಕಾಂಬಳೆ ಅವರು ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಿದ್ದಾರೆ. ಬಾಲಿವುಡ್ ನಟ ಜಾಕಿ ಶರಾಪ್ ಅವರು ಟಿವಿಎಸ್ ಸ್ಕೂಟಿ ಹೊಸ ಸ್ಕೂಟರನ್ನು ಬಹುಮಾನವಾಗಿ ನೀಡಿದ್ದೊಂದು ವಿಶೇಷ.

ಪ್ರಥ್ವಿರಾಜ್ ಝಿಟಿವಿಯಲ್ಲೂ ಡಾನ್ಸ್ ಕನ್ನಡ ಡ್ಯಾನ್ಸ್ ಕಾರ್ಯಕ್ರಮ ಕೂಡ ಆಯ್ಕೆಯಾಗಿದ್ದರು. ಯೂಟ್ಯೂಬನಲ್ಲಿ ಪೃಥ್ವಿರಾಜ್ ಸೂಪರ್ ಡಾನ್ಸರ್ ಅಂತ ಮಾಡಿದರೆ ಸಂಪೂರ್ಣ ಈತನ ವಿಡಿಯೋಗಳು ಲಭಿಸುತ್ತವೆ.


Leave a Reply