Belagavi

ಶಾಸಕರಿಂದ ೪.೫ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ


ಬೆಳಗಾವಿ : ದಿ ೧೨ ರಂದು ಬೆಳಗಾವಿ ನಗರದ ಅಭಿವೃದ್ಧಿಯ ಹರಿಕಾರ ಎಂದೇ ಗುರುತಿಸಲ್ಪಡುತ್ತಿರುವ ಶಾಸಕ ಅನಿಲ ಬೆನಕೆ ಅವರು, ವಿವಿಧ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ವಂಟಮುರಿ ಕಾಲನಿ, ಮುತ್ಯಾನಟ್ಟಿ, ಯಮನಾಪೂರ, ಬಸವನಕೊಳ್ಳದಲ್ಲಿ ಒಂದೇ ಸಮಯ ಟಿ.ಎಸ.ಪಿ. ಪಿ.ಡಬ್ಲೂö್ಯ.ಡಿ. ಇಲಾಖೆಯಿಂದ ೪.೫ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.
ಮಂಗಳವಾರ ಬೆಳಗಾವಿ ಪ್ರದೇಶದಲ್ಲಿ ಸುಮಾರು ೪.೫ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಡ್ರೇನೆಜ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ ಪ್ರದೇಶವನ್ನು ಸುಂದರವಾಘಿಸುವುದು ನಮ್ಮ ಗುರುಯಾಗಿದೆ. ಬೆಳಗಾವಿಯಲ್ಲಿಯ ರಸ್ತೆಗಳನ್ನು ಡಾಂಬರಿಕರಣ ಮಾಡಲು ಟೆಂಡರ ನೀಡಲಾಗಿತ್ತು ಆದರೆ, ಡಾಂಬರ ರಸ್ತೆ ಬಹು ದಿನಗಳ ಕಾಲ ಉಳಿಯುದಿಲ್ಲ ಎಂದು ಡಾಂಬರಿಕರಣದ ಬದಲು ಕಾಂಕ್ರೀಟ ರಸ್ತೆ ಮಾಡಲು ಭೂಮಿ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು.
ಬಾಕಿ ಉಳಿದಿರುವ ರಸ್ತೆಗಳಿಗೂ ಟೆಂಡರ ಕರೆಯಲಾಗಿದೆ. ಆದಷ್ಟು ಬೇಗನೆ ಎಲ್ಲಾ ರಸ್ತೆಗಳಿಗೂ ಕಾಂಕ್ರೀಟ ಹಾಕಲಾಗುತ್ತದೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸೇವಕರು, ಅಧಿಕಾರಿಗಳು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.


Leave a Reply