BallarybidarkaranatakaKoppal

ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿಯಾಗಿ ಆರ್. ವೆಂಕಟೇಶ್ ಕುಮಾರ್ ಅಧಿಕಾರ ಸ್ವೀಕಾರ


ಕಲಬುರಗಿ, ಅ. 12, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ( ಕೆ.ಕೆ.ಆರ್.ಡಿ.ಬಿ) ಯ ನೂತನ ಕಾರ್ಯದರ್ಶಿಯಾಗಿ ಆರ್. ವೆಂಕಟೇಶ್ ಕುಮಾರ್ ಅವರು ಇಂದು ಕಲಬುರಗಿಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಮಂಡಳಿಯು ಅಸ್ತಿತ್ವಕ್ಕೆ ಬಂದ 7 ವರ್ಷಗಳ ಬಳಿಕ ಪೂರ್ಣಪ್ರಮಾಣದ ಕಾರ್ಯದರ್ಶಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಿದಂತಾಗಿದೆ.
ಇದುವರೆಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರೇ ಮಂಡಳಿಯ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಕಳೆದ ಸೆ. 17ರಂದು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಕೆ.ಕೆ.ಆರ್.ಡಿ.ಬಿ.ಗೆ ಶಾಶ್ವತ ಕಾರ್ಯದರ್ಶಿ ನೇಮಿಸುವ ಭರವಸೆ ನೀಡಿದ್ದರು.

ವಿಶ್ವನಾಥ ಸಾಹುಕಾರ.
ರಾಯಚೂರು.


Leave a Reply