Belagavi

ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅವಧಿ ವಿಸ್ತರಣೆ


ಬೆಳಗಾವಿ, ಅ.೧೨ : ಬೆಳಗಾವಿ ಪಟ್ಟಣ ಪ್ರದೇಶದ ಎಲ್ಲ ಪಡಿತರ ಚೀಟಿದಾರರು ಇ-ಕೆವೈಸಿ ಸಂಗ್ರಹಣೆ ಕಾರ್ಯ ಅವಧಿಯನ್ನು ಅಕ್ಟೋಬರ್ ೧ ರಿಂದ ಅಕ್ಟೋಬರ್ ೩೧ ರ ವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಅವಧಿ ಒಳಗಾಗಿ ತಮ್ಮ ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್ ಗುರುತನ್ನು ನಿಮಗೆ ಸಂಬAಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ದಾಖಲಿಸಬಹುದು.
ಇ-ಕೆವೈಸಿ ಸೇವೆಯು ಉಚಿತ ಸೇವೆಯಾಗಿದ್ದು, ಇದಕ್ಕಾಗಿ ಯಾವುದೇ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಯಾವುದೇ ರೀತಿಯ ಮೊತ್ತ ನೀಡುವ ಅವಶ್ಯಕತೆ ಇರುವುದಿಲ್ಲ.ಒಂದು ವೇಳೆ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಅಥವಾ ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಬೇಕು.
ಅದಲ್ಲದೇ ಇದು ಪಡಿತರ ಚೀಟಿದಾರರಿಗೆ ಇ-ಕೆವೈಸಿ ನೀಡಲು ಕೊನೆಯ ಅವಕಾಶವಾಗಿದೆ. ತಪ್ಪಿದಲ್ಲಿ ಬಯೋಮೆಟ್ರಿಕ್ ನೀಡದ ಸದಸ್ಯರ ಪಡಿತರ ಆಹಾರ ಧಾನ್ಯಗಳನ್ನು ಕಡಿತಗೊಳ್ಳಬಹುದು ಅಥವಾ ಪಡಿತರ ಚೀಟಿ ರದ್ದಾಗಬಹುದು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply