Belagavi

ಸಚಿವ ಸಂಪುಟದ ವಿಸ್ತರಣೆ ಸುಳಿವು ಸಿಗುತ್ತಿದ್ದಂತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೋಳಿ


ಬೆಳಗಾವಿ. ಸಚಿವ ಸಂಪುಟದ ವಿಸ್ತರಣೆ ಸುಳಿವು ಸಿಗುತ್ತಿದ್ದಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಟೆಂಪಲ್ ರನ್ ಶುರು ಮಾಡಿದ್ದಾರೆ.

ಬುದುವಾರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೋಳಿ.ಉತ್ತರಾಖಂಡ ಮಂದಕಿನಿ ನದಿಯ ಸಮೀಪದ ಗಡ್ವಾಲ್ ಹಿಮಾಲಯ ವ್ಯಾಪ್ತಿಯಲ್ಲಿ ಬರುವ ಕೇದಾರನಾಥ ದೇವಾಲಯ. ರಮೇಶ್ ಜಾರಕಿಹೋಳಿಗೆ ಅಳಿಯ ಅಂಬಿರಾವ್ ಪಾಟೀಲ, ಪುತ್ರ ಅಮರನಾಥ ಜಾರಕಿಹೋಳಿ ಸೇರಿದಂತೆ ಹಲವು ಆಪ್ತರು ಸಾಥ್ ನೀಡಿದ್ದಾರೆ.

ಈ ಹಿಂದೆ ಮೊದಲಬಾರಿಗೆ ಸಚಿವರಾಗುವ ಮುನ್ನ ಒಂದು ತಿಂಗಳ ಮುಂಚೆ ಇದೇ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ರಮೇಶ್ ಜಾರಕಿಹೋಳಿ ಈಗಾ ಸಚಿವ ಸಂಪುಟದ ವಿಸ್ತರಣೆ ಮುನ್ನವೇ ಕೇದಾರನಾಥ ದೇವಾಲಯಕ್ಕೆ ಭೇಟಿ ಕುತೂಹಲ ಮೂಡಿಸಿದೆ. ರಮೇಶ್ ಜಾರಕಿಹೋಳಿ ಈ ಬಾರಿಯಾದರೂ ಸಚಿವ ಸ್ಥಾನ ಸಿಗುತ್ತಾ? ಎನ್ನುವುಸು ಕುತೂಹಲ ಮೂಡಿಸಿದೆ.


Leave a Reply