Belagavi

ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ನಾಟಕೋತ್ಸವ


ಹುಕ್ಕೇರಿ – ರಂಗಾಯಣ ಧಾರವಾಡ ಇವರು ನಾಡಹಬ್ಬ ದಸರಾ ಉತ್ಸವ ನಿಮಿತ್ಯ 3 ದಿನಗಳ ಕಾಲ ನಾಟಕೋತ್ಸವ ಏರ್ಪಡಿಸಲಾಗಿದೆ ಇದೆ 12.13.14 ರಂದು ನಗರದ ಪುರಸಭೆ ಮುಂಬಾಗದಲ್ಲಿ ನಾಟಕೋತ್ಸವವನ್ನು ನಡೆಸಲಾಗುವುದು ಎಂದು ರಂಗಾಯಣ ಧಾರವಾಡದ ನಿರ್ದೇಶಕರಾದ ರಮೇಶ್ ಎಸ್ ಪರವಿನಾಯಕ ಹಾಗೂ ಹುಕ್ಕೇರಿ ಪುರಸಭೆಯ ಅಧ್ಯಕ್ಷ ಎ ಕೆ ಪಾಟೀಲ ಅವರು ಜಂಟಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು , ಉತ್ತರ ಕರ್ನಾಟಕದಲ್ಲಿಯೇ ಸುಪ್ರಸಿದ್ಧ ದಸರಾ ಎಂದೇ ಖ್ಯಾತರಾಗಿರುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಆನತಿಯಂತೆ 3 ದಿನಗಳ ಕಾಲ ನಾಟಕೋತ್ಸವ ಏರ್ಪಡಿಸಿದ್ದೆವೆ ಎಂದರು, ದಿನಾಂಕ 12 ರಂದು ಅಕಸ್ಮಾತ್ ಹಿಂಗಾದ್ರೆ ಎಂಬ ನಾಟಕವನ್ನು ನಡೆಸಲಾಗುತ್ತಿದ್ದು ಬೃಹತ್ ಮತ್ತು ಮಧ್ಯಮ ನಿರಾವರಿ ಸಚಿವರಾದ ಗೊವಿಂದ ಕಾರಜೋಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದಸರಾ ಉತ್ಸವ ಸಮಿತಿಯ ಅಧ್ಯಕ್ಷರು ಅರಣ್ಯ ಆಹಾರ ಪಡಿತರ ವಿತರಣಾ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರು ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಶ್ರೀಮತಿ ಶಶಿಕಲಾ ಜೊಲ್ಲೆ ಮುಜರಾಯಿ ಸಚಿವರು ಕರ್ನಾಟಕ ಸರ್ಕಾರ, ಕೆ ಎಮ ಎಪ್ ಅಧ್ಯಕ್ಷರಾದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ,ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರು ಶಾಸಕರಾದ ಸತೀಶ ಜಾರಕಿಹೊಳಿ ಅವರು ಆಗಮಿಸಲಿದ್ದಾರೆ, ದಾರೆ ಮುಖ್ಯ ಅತಿಥಿಗಳಾಗಿ ಶಶಿಕಾಂತ ನಾಯಕರವರು ಜಯಗೌಡ ಪಾಟಿಲ್, ಪ್ರಶಾಂತ್ ರಿಪ್ಪನಪೇಟೆ, ಪರಗೌಡ ಪಾಟೀಲ ಅವರು ಆಗಮಿಸಲಿದ್ದಾರೆ ಎಂದರು. ದಿನಾಂಕ 13 ರಂದು ಕತ್ತಲೆ ಕರುಣ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಈ ಕಾರ್ಯಕ್ರಮದ ಸಾನಿಧ್ಯವನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು ಶ್ರೀ ರಾಘವೇಂದ್ರ ಕಾಗವಾಡ ಜಿ ಉ ಕ ಪ್ರಾಂತ್ಯ ಕಾರ್ಯವಾಹ ಅವರು ನಾಟಕಕ್ಕೆ ಚಾಲನೆ ನೀಡಲಿದ್ದಾರೆ , ಬೆಳಗಾವಿ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರು, ಬೆಳಗಾವಿ ಸುವರ್ಣ ವಿಧಾನಸೌಧದ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬಿ ವಿ ಗೀತಾ ಅವರು, ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯೋಗ ನಿಯಮಿತ ಬೆಂಗಳೂರಿನ ಉಪಾಧ್ಯಕ್ಷರಾದ ಜಗದೀಶ್ ಕವಟಗಿಮಠ ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ .ದಿನಾಂಕ 14 ರಂದು ನಡೆಯುವ ಸಾಮ್ರಾಟ್ ಅಶೋಕ್ ನಾಟಕವನ್ನು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ನಾಟಕಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ರಂಗ ಸಮಾಜದ ಸದಸ್ಯರಾದ ಹಿಪ್ಪರಗಿ ಸಿದ್ದರಾಮ ಅವರು ಬೆಳಗಾವಿಯ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ , ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರಾದ ಮುಕ್ತಾರ್ ಹುಸೇನ್ ಪಠಾಣ್, ಕಾ ಡಾ ಅಧ್ಯಕ್ಷರಾದ ಡಾಕ್ಟರ್ ವಿಶ್ವನಾಥ್ ಪಾಟೀಲರನ್ನು ಮೊದಲುಗೊಂಡು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ನಾಟಕೊತ್ಸವದಲ್ಲಿ ತಾವು ಭಾಗವಹಿಸಿ ನಾಟಕವನ್ನು ಯಶಸ್ವಿಗೊಳಿಸಬೆಕೆಂದು ರಮೇಶ ಎಸ್ ಪರಿವಿನಾಯಕ ಸುದ್ದಿ ಗೊಷ್ಠಿಯಲ್ಲಿ ಮಾತನಾಡಿದರು ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಆನಂದ ಗಂಧ ಹಾಗೂ ಸುರೇಶ್ ಜಿನರಾಳಿ ಉಪಸ್ಥಿತರಿದ್ದರು .


Leave a Reply