Uncategorized

ತಾಲೂಕ ವೈದ್ಯಾಧಿಕಾರಿ ವಿರುದ್ಧ ಆಯುಷ್ ವೈದ್ಯಾಧಿಕಾರಿಗಳ ಪ್ರತಿಭಟನೆ


ಆಯುಷ್ ವೈದ್ಯಾಧಿಕಾರಿಗಳ ವಿರುದ್ಧ ಪತ್ರಿಕೆಯೊಂದರಲ್ಲಿ ಹೇಳಿಕೆ ನೀಡಿದ್ದ ಬೆಳಗಾವಿ ತಾಲೂಕ ವೈದ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿಮಠ ವಿರುದ್ಧ ಆಯುಷ್ ಫೆಡರೇಶನ್ ಬೆಳಗಾವಿ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಬುದುವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಅವರು ತಾಲೂಕ ವೈದ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು.  ಆಯುಷ್ ವೈದ್ಯಾಧಿಕಾರಿಗಳು ಬೋಗಸ್ ವೈದ್ಯರು ಎಂದು ಪತ್ರಿಕೆಯೊಂದಕ್ಕೆ  ತಾಲೂಕಾ ವೈದ್ಯಾಧಿಕಾರಿಗಳಾದ ಶಿವಾನಂದ ಮಾಸ್ತಿಹೊಳಿಮಠ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯನ್ನು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠರವರಿಗೆ ಮನವಿಯನ್ನು ಸಲ್ಲಿಸಿದರು.

ಇತ್ತೀಚೆಗೆ ಆಯುಷ್ ವೈದ್ಯರ ಕುರಿತು ನೀಡಿದ ಹೇಳಿಕೆ ಸರಿಯಲ್ಲ. ನಾವೇನು ಬೋಗಸ್ ಅಲ್ಲ. ನಾವೂ ಐದು ವರ್ಷ ಕಾಲೇಜಿನಲ್ಲಿ ಕಲಿತು, ಸರಿಯಾದ ತಬೇತಿಯನ್ನು ಪಡೆದೇ ಕಾರ್ಯ ಮಾಡುತ್ತಿದ್ದೇವೆ. ಆಲ್ಲದೇ ಕೋವಿಡ್ ಸಂದರ್ಭದಲ್ಲಿ ನಾವೂ ಕೂಡ ಸರಕಾರಕ್ಕೆ ಪೂರಕವಾಗಿ ದುಡಿದಿದ್ದೇವೆ ಎಂದು ಪ್ರತಿಭಟನೆಯಲ್ಲಿ ನೆರದಿದ್ದ ವೈದ್ಯರು ಆಕ್ರೋಶ ಹೊರಹಾಕಿದರು.

ಕೆಪಿಎಮ್‍ಎ ಕಾಯ್ದೆಯನ್ನು ಅಡ್ಡ ಇಟ್ಟುಕೊಂಡಿ ಇತ್ತೀಚೆಗೆ ಆಯುಷ್ ವೈದ್ಯಾಧಿಕಾರಿಗಳ ಮೇಲೆ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತಂತೆ ಸರಕಾರದೊಂದಿಗೆ ಸುಮಾರು 10 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಈಂದಿಗೂ ನ್ಯಾ ಸಿಕ್ಕಿಲ್ಲ. ಹಾಗಾಗಿ ನ್ಯಾಯ ವದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸುರೇಶ ಚೌಗುಲಾ, ಪ್ರವೀಣ್ ದೋಣ್ಯಾನವರ್, ವಿನೋದ್ ಪಟ್ಟಣ್, ಅದೇಶ್ವರ್ ಗಣಿ, ಮೊದಲಾದವರು ಉಪದ್ಥಿತರಿದ್ದರು.

 


Leave a Reply